Afzalpur | ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದಲ್ಲಿ ಜನಪರ ನಾಯಕತ್ವದ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ: ಅಂಬರೀಶ ಬುರಲಿ

ಅಫಜಲಪುರ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭೆಯ ಪ್ರತಿಪಕ್ಷ ನಾಯಕರು ಹಾಗೂ 371(ಜೆ) ಕಲಂ ಜಾರಿಯ ಪ್ರಮುಖ ರೂವಾರಿಗಳಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಮಟ್ಟದಲ್ಲಿ ಜನಪರ ನಾಯಕತ್ವದ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿರುವ ನಾಯಕರು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಅಂಬರೀಶ ಬುರಲಿ ಹೇಳಿದರು.
ಕಾಂಗ್ರೆಸ್ ಪಕ್ಷ ಹಾಗೂ ಖರ್ಗೆ ಅವರ ಅಭಿಮಾನಿಗಳ ವತಿಯಿಂದ ಅವರ 84ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳು ಹಾಗೂ ಬಾಣಂತಿ ತಾಯಂದಿರಿಗೆ ಹಣ್ಣು-ಹಂಪಲು ಮತ್ತು ಬ್ಲ್ಯಾಂಕೆಟ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಬಡವರು, ರೈತರು, ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಪರವಾಗಿ ನಿರಂತರವಾಗಿ ಧ್ವನಿಯೆತ್ತಿದ ರಾಷ್ಟ್ರಮಟ್ಟದ ನಾಯಕರು. ಅವರ ಸರಳತೆ, ಪ್ರಾಮಾಣಿಕತೆ, ಆಡಳಿತ ಅನುಭವ ಹಾಗೂ ಜನಪರ ರಾಜಕಾರಣ ಯುವ ನಾಯಕರಿಗೆ ಮಾದರಿಯಾಗಿದೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಮುಖಂಡರಾದ ಸಿದ್ದು ಮಗಿ, ಗೌತಮ ಸಕ್ಕರಗಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಖರ್ಗೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಣವೀರಯ್ಯ ಮಠಪತಿ, ಪ್ರವೀಣ ಕಲ್ಲೂರ, ಮಲ್ಲಯ್ಯ ಹೊಸಮಠ, ಮಲ್ಲಿಕಾರ್ಜುನ ಖರ್ಗೆ, ಮಾಜೀದ್ ಪಟೇಲ್, ಶ್ರೀಶೈಲ ಗೌರ, ಬಸವರಾಜ ಅಂದೋಡಗಿ, ದುಂಡು ಜಮಾದಾರ, ಪ್ರೀತಮ್ ಚವಾಣ, ಗುರುಶಾಂತ ಡಾಂಗೆ, ಮಳೇಂದ್ರ ಡಾಂಗೆ, ಶಶಿ ಆರೇಕಾರ, ರವಿ ಗೌರ, ಮಹಾಂತೇಶ ಜಮಾದಾರ, ಮಲ್ಲು ಬೂತಿ, ಜೆಕ್ಕಪ್ಪ ಪೂಜಾರಿ, ಶ್ರೀಧರ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






