ಅಫಜಲಪುರ | ಕಲಾಲ ಸಮಾಜದ ಕಾರ್ಯದರ್ಶಿಯಾಗಿ ಭಾಗಣ್ಣ ಕಲಾಲ ಆಯ್ಕೆ

ಅಫಜಲಪುರ: ಕಲಾಲ ಸಮಾಜದ ತಾಲೂಕು ಯುವ ಘಟಕದ ಕಾರ್ಯದರ್ಶಿಯಾಗಿ ದೇವಣಗಾಂವ್ ಗ್ರಾಮದ ಭಾಗಣ್ಣ ಲಕ್ಷ್ಮಣ ಕಲಾಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಕಲಾಲ ಸಮಾಜದ ಅಧ್ಯಕ್ಷ ಮನೋಹರ ಕಲಾಲ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಲಾಲ ಸಮಾಜದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಭಾಗಣ್ಣ ಕಲಾಲ, “ಸಮಾಜದ ಯುವಶಕ್ತಿಯನ್ನು ಒಗ್ಗೂಡಿಸಿ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಹಿರಿಯರ ಮಾರ್ಗದರ್ಶನದಲ್ಲಿ ಯುವಕರಿಗೆ ನಾಯಕತ್ವದ ಅವಕಾಶ ಕಲ್ಪಿಸಿ ಕಲಾಲ ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಲಾಗುವುದು” ಎಂದು ಹೇಳಿದರು.
ತಾಲೂಕು ಕಲಾಲ ಸಮಾಜದ ಅಧ್ಯಕ್ಷ ಮನೋಹರ ಕಲಾಲ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಯುವ ಘಟಕದ ಅಧ್ಯಕ್ಷ ಪರುಶರಾಮ ಕಲಾಲ, ದೇವಣಗಾಂವ್ ಗ್ರಾಮ ಘಟಕದ ಅಧ್ಯಕ್ಷ ಅನೀಲ ಕಲಾಲ, ರವಿ ಕಲಾಲ ಹಾಗೂ ರಜಪೂತ ಸಮಾಜದ ಮುಖಂಡ ಅಮರಸಿಂಗ ರಜಪೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Next Story





