ಅಫಜಲಪುರ | ಜನಗಣತಿ; ಗಣತಿದಾರರಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುವುದು : ಫಕ್ರೂದ್ದಿನ್

ಅಫಜಲಪುರ: 2027ರ ಜನಗಣತಿಸಂಪೂರ್ಣ ಡಿಜಿಟಲ್ ಆಧಾರಿತ ಪ್ರಕ್ರಿಯೆಯಾಗಿದ್ದು, ದೋಷರಹಿತ ಹಾಗೂ ಪಾರದರ್ಶಕ ಮಾಹಿತಿ ಸಂಗ್ರಹಣೆಗೆ ಗಣತಿದಾರರಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಫಕ್ರೂದ್ದಿನ್ ಹೇಳಿದರು.
ಪಟ್ಟಣದ ಶ್ರೀ ನಾಗರಾಜ ಪದಕಿ ಶಿಕ್ಷಣ ಸಂಸ್ಥೆಯಲ್ಲಿ ಪುರಸಭೆ ವತಿಯಿಂದ ಶುಕ್ರವಾರ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಸಲು ‘ಸ್ವಯಂ-ಗಣತಿ’ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದ್ದು, ಇದರಿಂದ ಪ್ರಕ್ರಿಯೆ ಸುಲಭ ಹಾಗೂ ವೇಗವಾಗಲಿದೆ ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 56 ಗಣತಿದಾರರು ಹಾಗೂ 10 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಂ.ಜಿ. ಬಿರಾದಾರ, ಸುಮನ್ ಶಂಕರರಾವ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.
Next Story





