ಅಫಜಲಪುರ | ಅಕ್ಷರಧಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.6ರಂದು ಮಕ್ಕಳ ಹಬ್ಬ

ಅಫಜಲಪುರ : ತಾಲೂಕಿನ ಬಂದರವಾಡ ಗ್ರಾಮದ ಅಕ್ಷರಧಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.6ರಂದು ಸಂಜೆ 6 ಗಂಟೆಗೆ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಿಯಾಝ್ ಇನಾಮದಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಲಾ ಸಿಬ್ಬಂದಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಗ್ರಾಮದ ಸುರಗಿಮಠದ ಷ.ಬ್ರ. ಶಾಂತವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ವೇ. ಶಿವಲಿಂಗಯ್ಯ ಮಠಪತಿ ಅವರ ಸಮ್ಮುಖದಲ್ಲಿ ಗೋಮಾತಾ ಸಹಕಾರ ಸಂಘ ನಿಯಮಿತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಅಧ್ಯಕ್ಷ ಕೇಶವ ಮೋಟಗಿ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಶೈಲ ತೆಲ್ಲೂರ, ಶಿವಶಂಕರ ಇಟಗಿ, ಅಮೃತ ಸಾಹುಕಾರ ಅವಂಟಿ ಅವರು ಜ್ಯೋತಿ ಬೆಳಗಿಸುವರು. ಫರಹತಾಬಾದ್ ವಲಯದ ಕಾಂಗ್ರೆಸ್ ಮುಖಂಡ ಗುರಣ್ಣ ಸಾಹುಕಾರ ಅವಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಶ್ಫಾಕ್ ಗೊಬ್ಬೂರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಪಿಎಸ್‌ಐ ಸಂಗೀತ ಸಿಂಧೆ ಸೇರಿದಂತೆ ವಿವಿಧ ಗ್ರಾಮಗಳ ಸಮಾಜ ಸೇವಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರು ಭಾಗವಹಿಸಲಿದ್ದಾರೆ ಎಂದು ರಿಯಾಝ್ ಇನಾಮದಾರ ಮಾಹಿತಿ ನೀಡಿದರು.







