Afzalpur | ಪುಣ್ಯಸ್ಮರಣೆ ಅಂಗವಾಗಿ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ

ಅಫಜಲಪುರ: ತಾಲೂಕಿನ ಹಾವನೂರ ಗ್ರಾಮದ ದಿವಂಗತ ಶಾಂತಾಬಾಯಿ ಸಿದ್ದಪ್ಪ ಚಿಂಚೋಳಿ ಅವರ 3ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪುತ್ರ ಸಂತೋಷ ಹಾವನೂರ ಅವರು ಕಲಬುರಗಿ ನಗರದ ಕಾಕಡೆ ಚೌಕ್ ಸಮೀಪದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯಕ್ರಮವನ್ನು ಆಯೋಜಿಸಿದರು.
ಪುಣ್ಯಸ್ಮರಣೆ ಅಂಗವಾಗಿ ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ತಾಯಿಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೃದ್ಧಾಶ್ರಮದ ಮೇಲ್ವಿಚಾರಕಿ ಶ್ರೀಮತಿ ಗಂಗಮ್ಮ ರೇವಸಿದ್ಧ, ಕಾಂಗ್ರೆಸ್ ಯುವ ಮುಖಂಡ ಉಮೇಶ್ ಶ್ರೀಗೇರಿ, ರಜನಿಕಾಂತ ಸಿಂಗೆ ಹಾಗೂ ಭೀಮ ಯುವ ಸೇನೆ (ರಿ.) ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಸಂತೋಷ ಹಾವನೂರ ಸೇರಿದಂತೆ ಇತರರು ಉಪಸ್ಥಿತರಿದ್ದು, ದಿವಂಗತ ಶಾಂತಾಬಾಯಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಸಾಮಾಜಿಕ ಸೇವೆಯ ಮೂಲಕ ಪುಣ್ಯಸ್ಮರಣೆಯನ್ನು ಆಚರಿಸಿರುವ ಸಂತೋಷ ಹಾವನೂರ ಅವರ ಕಾರ್ಯಕ್ಕೆ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
Next Story




