Afzalpur | ಶಿವರಾಜ್ ತಂಗಡಗಿಗೆ ಸಚಿವ ಸ್ಥಾನ : ಭೋವಿ ಸಮಾಜದಿಂದ ಸಂಭ್ರಮಾಚರಣೆ

ಅಫಜಲಪುರ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಭೋವಿ ಸಮಾಜದ ಹಿರಿಯ ಮುಖಂಡ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅಫಜಲಪುರ ಪಟ್ಟಣದಲ್ಲಿ ಭೋವಿ ಸಮಾಜದ ಮುಖಂಡರು ಹಾಗೂ ಬಾಂಧವರು ಸಂಭ್ರಮಾಚರಣೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಮಾಜದ ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವರಾಜ ತಂಗಡಗಿ ಅವರಿಗೆ ಅಭಿನಂದನೆ ಸಲ್ಲಿಸಿದ ಮುಖಂಡರು, ಅವರ ಸಚಿವ ಸ್ಥಾನದಿಂದ ಭೋವಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರ ಭೋವಿ ಸಂಘದ ಅಧ್ಯಕ್ಷ ಪ್ರಮೋದ್ ಭೋವಿ ನೇತೃತ್ವ ವಹಿಸಿದ್ದರು. ಸಮಾಜದ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಸಮಾಜದ ಬಾಂಧವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಜಾಧವ್, ಮಾರುತಿ ಜಾದವ, ಹಣಮಂತ ಘೋಟೆಕರ್, ವೆಂಕಟೇಶ್ ಜಾದವ, ಅಶೋಕ ಜಾದವ, ಚಂದ್ರಕಾಂತ ಜಾದವ, ನಾಗು ಜಾದವ, ಸಿದ್ದರಾಮ ಸುಲ್ತಾನಪೂರ, ಸುರೇಶ್ ಹಿಂಚಗೇರಿ, ಸೋಮಣ್ಣ ಜಾದವ, ಮಹಾದೇವ ಜಾದವ, ಕೆಂಚಪ್ಪ ಜಾದವ, ಎಸ್.ಜಿ. ಸುಲೇ, ರಾಮಣ್ಣ ಜಾದವ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.






