ಅಫಜಲಪುರ | ನವ ವಧುವರರು ಸನ್ಮಾರ್ಗದಲ್ಲಿ ನಡೆಯಬೇಕು: ಡಾ.ಮುರುಘರಾಜೇಂದ್ರ ಮಹಾಸ್ವಾಮಿ

ಅಫಜಲಪುರ: ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು–ವರರು ಸನ್ಮಾರ್ಗದಲ್ಲಿ ನಡೆಯಬೇಕು ಹಾಗೂ ದಾನ–ಧರ್ಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಡಗಾ ಮತ್ತು ಮುಗಳಖೋಡ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ತಾಲೂಕಿನ ಕರಜಗಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ವಧು–ವರರಿಗೆ ಆಶೀರ್ವಚನ ನೀಡುತ್ತ ಅವರು ಮಾತನಾಡಿದರು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 11 ಜೋಡಿಗಳು ನವ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ರಾಜಕುಮಾರ ಜಿಡ್ಡಗಿ, ಕಾಂತು ಉಪ್ಪಿನ, ಭೀಮಶಾ ಪರೀಟ, ಅಶೋಕ ಲೋಣಾರ, ಬಸು ಹೂಗಾರ, ಶೀಶೈಲ ಘತ್ತರ್ಗಿ, ಪಿಂಟು ರೇವೂರ, ಶ್ರೀಮಂತ ನಾವಿ, ಸಿದ್ದು ಹಳಗೋಧಿ, ಭಿಮಾಶಂಕರ ಭುಯ್ಯಾರ್, ಚಿದು ತಳವಾರ, ಗೊಲ್ಲಾಳ ಮಲಘಣ, ಸುಧಾಕರ ಗಳವೆ, ವಿಠೋಬಾ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಥೋತ್ಸವಕ್ಕೆ ಚಾಲನೆ :
ಗ್ರಾಮದಲ್ಲಿ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಸದ್ಗುರು ಯಲ್ಲಾಲಿಂಗೇಶ್ವರ ರಥೋತ್ಸವ ಶನಿವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವಕ್ಕೂ ಮುನ್ನ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನಡೆಯಿತು.







