Afzalpur | ಗೊಬ್ಬೂರಿಗೆ ಮಂಜೂರಾದ 500 ಮನೆ ಹಂಚಿಕೆ ಆಗದಿದ್ದರೆ ಹೆದ್ದಾರಿ ತಡೆ : ನಿತಿನ್ ಗುತ್ತೇದಾರ್ ಎಚ್ಚರಿಕೆ
ಕಾಂಗ್ರೆಸ್ ತೊರೆದು 100ಕ್ಕೂ ಹೆಚ್ಚು ಜನ ಬಿಜೆಪಿ ಸೇರ್ಪಡೆ

ಅಫಜಲಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೊಬ್ಬೂರ ಗ್ರಾಮಕ್ಕೆ ಮಂಜೂರಾಗಿದ್ದ 500 ಮನೆಗಳನ್ನು ಇದುವರೆಗೆ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಶೀಘ್ರದಲ್ಲೇ ಗ್ರಾಮಸ್ಥರೊಂದಿಗೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಲಬುರಗಿ ನಗರದ ನಿವಾಸದಲ್ಲಿ ಗೊಬ್ಬೂರ, ಹಾವನೂರ, ಅವರಳ್ಳಿ ಹಾಗೂ ಬಾದನಳ್ಳಿ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಮನೆಗಳ ಮಂಜೂರಾತಿ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
35 ವರ್ಷಗಳಿಗೂ ಹೆಚ್ಚು ಕಾಲ ಪಾಟೀಲ್ ಕುಟುಂಬದೊಂದಿಗಿದ್ದ ಸಂಬಂಧವನ್ನು ಬಿಟ್ಟು ಈಗ ಬಸಲಿಂಗಪ್ಪ ದೇವತ್ಕಲ್ ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ ನಿತಿನ್ ಗುತ್ತೇದಾರ್, ತಮ್ಮನ್ನು ಕೇವಲ ರಾಜಕೀಯ ನಾಯಕನಾಗಿ ಅಲ್ಲ, ಮನೆಯ ಮಗನಾಗಿ ನೋಡಬೇಕು. ತಾಲೂಕಿನ ಜನರ ಕಷ್ಟ–ಸುಖಗಳಲ್ಲಿ ಪ್ರಾಮಾಣಿಕವಾಗಿ ಭಾಗಿಯಾಗುವುದಾಗಿ ಹೇಳಿದರು.
ತಾಲೂಕಿನ ಬಹುತೇಕ ಗ್ರಾಮಗಳಿಗೆ ಇನ್ನೂ ಬೆಳೆ ವಿಮೆ ದೊರೆತಿಲ್ಲ. ಅಲ್ಲದೆ ಅಫಜಲಪುರವನ್ನು ಕೇವಲ ಸಾಧಾರಣ ಬರಪೀಡಿತ ಪ್ರದೇಶವೆಂದು ಘೋಷಿಸಿರುವುದು ರೈತರಿಗೆ ಅನ್ಯಾಯವಾಗಿದೆ. ಈ ಸೇರಿದಂತೆ ಜನರ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಮಾಜಿ ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ದೇವತ್ಕಲ್, ದಲಿತ ಮುಖಂಡ ಶೀವು ಬಾದನಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್ ಗುತ್ತೇದಾರ್, ಪ್ರಭು ದೇವತ್ಕಲ್,ರಾಜಶೇಖರ ಜಿಡ್ಡಗಿ, ವಿಶ್ವನಾಥ್ ರೇವೂರ, ಸುಭಾಷಚಂದ್ರ ರಾಠೋಡ, ಜ್ಯೋತಿ ಪ್ರಕಾಶ್ ಪಾಟೀಲ್, ಗುರು ಸಾಲಿಮಠ, ಮಹಾಂತೇಶ ಉಜನಿ, ಸುನೀಲ್ ಶೆಟ್ಟಿ, ನಾಗೇಶ್ ಕೊಳ್ಳಿ, ಧಾನು ಪತಾಟೆ, ರಾಜು ಪಡಶೆಟ್ಟಿ,ಮಲ್ಲು ದೇವತ್ಕಲ್, ಆನಂದ ರಾಕಾ, ಹುಣಚಪ್ಪ ಮೈನಾಳ, ಸಾಧಿಕ್ ಅಫಜಲಪುರ, ಶಿವಕುಮಾರ ಪಡಶೆಟ್ಟಿ, ಪ್ರವೀಣ್ ವಗ್ಗೆ,ಬಾಬು ನವಲೇಕರ,ಬಾಬು ಕರನಾಕ, ಹಣಮಂತ ಪೂಜಾರಿ,ಶರಣು ಕಾಳಗೊಂಡ, ಶಿವಾನಂದ ಅಲದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆಗೊಂಡ ಮುಖಂಡರು :
ಬಸಲಿಂಗಪ್ಪ ದೇವತ್ಕಲ್, ಶೀವು ಬಾದನಳ್ಳಿ, ಪ್ರವೀಣ್ ದೇವತ್ಕಲ್,ಶಂಕರೇಪ್ಪ ದೇವತ್ಕಲ್,ಯಮನಪ್ಪ ಗವಾಯಿ,ಮಲ್ಲು,ವಿರೇಶ್ ಮದರಕಿ,ಅವೀನ್ ಜಮಾದಾರ, ಶಿವಪ್ಪ ಉಡಗಿ, ಶಿವಶರಣಪ್ಪ ಕೋಳಕೂರ, ಸುಭಾಷ್ ಅವರಾದಿ, ಶಿವಾನಂದ ತಳವಾರ, ಮಹಾಂತೇಶ, ಈರಣ್ಣ ಪೂಜಾರಿ,ಶಿವಪ್ಪ ಪೂಜಾರಿ, ಮಲ್ಲಣ್ಣ ನಂದಿ, ಕುಮಾರ ಕೋಳಿಗೇರಿ, ಹಣಮಂತ ಕುಶಾಳಕರ, ಮಲ್ಲು ಚಪರಬಂದಿ, ಭಾಲ್ಕಿ ಮಾಸ್ಟರ್, ಸೈಬಣ್ಣ ಹಡಪದ, ಗೌಸ್ ಜಮಾದಾರ, ಸಾಧಿಕ್ ಮಾಶಾಳ, ಇರ್ಫಾನ್ ಅವರಳ್ಳಿ, ಸೈಫನ್ ಅವರಳ್ಳಿ, ಅಲಿಸಾಬ ಅತ್ತಾರ್, ಮೋಶಿನ್ ಜಮಾದಾರ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.






