Afzalpur | ಚಂದ್ರಗಿರಿ ಜಾತ್ರೆ ಪ್ರಯುಕ್ತ ಶಾಂತಿ ಸಭೆ

ಅಫಜಲಪುರ : ತಾಲೂಕಿನ ಆನೂರ ಗ್ರಾಮದ ಶ್ರೀ ಚಂದ್ರಗಿರಿ ದೇವಿ ಜಾತ್ರೆ ಶಾಂತಿಯುತವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ದೇವಾಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಸಿಪಿಐ ಲಖನ್ ಮಸಗುಪ್ಪಿ ತಿಳಿಸಿದರು.
ಗ್ರಾಮದಲ್ಲಿ ನಡೆಯಲಿರುವ ಶ್ರೀ ಚಂದ್ರಗಿರಿ ದೇವಿ ಹಾಗೂ ಕಾಳಿಕಾದೇವಿ ಜಾತ್ರೆಯ ಕುರಿತು ಮಾತನಾಡಿದ ಅವರು, ಜಾತ್ರೆಯನ್ನು ಗ್ರಾಮಸ್ಥರು ಹಾಗೂ ದೇವಾಸ್ಥಾನ ಸಮಿತಿ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಭಕ್ತಿಭಾವದಿಂದ ಆಚರಿಸಬೇಕು ಎಂದರು.
ಜಾತ್ರೆಯ ಅಂಗವಾಗಿ ಸಂಜೆ 6 ಗಂಟೆಗೆ ನಡೆಯುವ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮವನ್ನು ಶಿಸ್ತಿನಿಂದ ನಡೆಸಬೇಕು. ಜೊತೆಗೆ ಗ್ರಾಮಸ್ಥರು ಆಯೋಜಿಸಿರುವ ಸಾಮಾಜಿಕ ನಾಟಕ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೆರವೇರಿಸಬೇಕು ಎಂದು ಹೇಳಿದರು.
ಜಾತ್ರೆಯ ಸಂದರ್ಭದಲ್ಲಿ ಯಾರಾದರೂ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ದೇವಸ್ಥಾನ ಕಮಿಟಿ ಮುಖಂಡರು ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ದತ್ತು ಗಾಣೂರ, ನಿಂಗಣ್ಣ ಕಲಶೆಟ್ಟಿ, ಈರಣ್ಣಗೌಡ ಪಾಟೀಲ, ಬಾಬು ತಳವಾರ, ಡಾ.ಸಂಗಣ್ಣ ಸಿಂಗೆ, ಶ್ರೀಮಂತ ಭಂಡಾರಿ, ಹಣಮಂತ ಗೌಂಡಿ, ಮಲ್ಲೇಶಿ ಉಮ್ಮನಗೋಳ, ಮಾನಪ್ಪ ಗೌಂಡಿ, ವಿಜಯಕುಮಾರ ಭಂಡಾರಿ, ಶಿವು ಸೀತನೂರ, ಅಂಬರೀಶ್ ಪಟ್ಟಣ, ಮಲ್ಲಣಗೌಡ ಮಾಲೀಪಾಟೀಲ, ಬಲಭೀಮ ಬಳೂಂಡಗಿ, ದತ್ತು ಕಲಶೆಟ್ಟಿ, ಕರೇಪ್ಪ ಪೂಜಾರಿ, ಜಯಾನಂದ ನಾವಿ, ಮನೋಹರ ಸುತಾರ, ಮಲ್ಲು ಜೀರೋಳಿ ಇದ್ದರು.






