ಅಫಜಲಪುರ | ಸ್ವಾತಂತ್ರ್ಯ ಚಳವಳಿ ಕುರಿತ ರಸಪ್ರಶ್ನೆ : ವಿಜೇತರಿಗೆ ಪ್ರಮಾಣ ಪತ್ರ ವಿತರಣೆ

ಅಫಜಲಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನೂರು ಅವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ "ಸ್ವಾತಂತ್ರ್ಯ ಚಳವಳಿ" ಕುರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವಲಯ CRC ಸುಲೇಮಾನ್ ಚೌಧರಿ ಅವರು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶಿವಪುತ್ರ ರುದ್ದೇವಾಡಿ ಅವರು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಫಜಲಪುರ ತಾಲೂಕು ಜ್ಞಾನ ವಿಜ್ಞಾನ ಸಮಿತಿಯ ಸದಸ್ಯ ಮತ್ತು ರಸಪ್ರಶ್ನೆ ಸ್ಪರ್ಧೆಯ ಸಂಯೋಜಕ ಶಿಕ್ಷಕ ರಮೇಶ್ ಮುಜಗೊಂಡ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಸಿದ್ಧರಾಮ ಉಡಚಣ, ಸುಹಾಸಿನಿ ದಿಕ್ಸಂಗಿ, ವೈಜಯಂತಿ ದಿಕ್ಸಂಗಿ, ಶಿವಲಿಂಗ ದೊಡ್ಡಮನಿ, ಚಂದ್ರಶಾ ಕುದರಿ, ಗುರುಶಾಂತಪ್ಪ, ಅರುಣಾ, ಜಯಮಾಲಾ, ಶರಣಮ್ಮ, ಪೀರಪ್ಪ, ಸುಧೀರಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು.
Next Story





