Afzalpur | ಕೃಷಿ ಹೊಂಡಕ್ಕೆ ಬಿದ್ದಿದ್ದ ಎರಡು ನಾಯಿಗಳ ರಕ್ಷಣೆ

ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಶ್ರೀ ಶಿವಯ್ಯ ಬಸಯ್ಯ ದಿಕ್ಕ ಸಂಗಿ ಅವರ ಸರ್ವೆ ನಂ. 17/5ರ ಹೊಲದಲ್ಲಿರುವ 100×100 ಅಡಿ ವಿಸ್ತೀರ್ಣದ ಕೃಷಿ ಹೊಂಡಕ್ಕೆ ಬಿದ್ದಿದ್ದ ಎರಡು ನಾಯಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಎರಡು ನಾಯಿಗಳು ಕಾದಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದಿರುವ ಮಾಹಿತಿ ದೊರಕುತ್ತಿದ್ದಂತೆಯೇ ಅಫಜಲಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಶೋಕ್ ಜಮಾದಾರ್ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಪ್ರಕಾಶ ಮೇತ್ರಿ, ಅಗ್ನಿಶಾಮಕ ಚಾಲಕ ಶಿವಾನಂದ ಕುಂಬಾರ್, ಚಾಲಕ-ತಂತ್ರಜ್ಞ ಅಜರುದ್ದೀನ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಾದ ಸದಾನಂದ ಸೊಪ್ಪಿ, ಮಹಾಂತೇಶ್ ಜಮಾದಾರ್, ಶರಣ, ಪ್ರಮೋದ ಎನ್.ಸಿ. ಮತ್ತು ಅಕ್ಷಯ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಿಬ್ಬಂದಿ ಕೃಷಿ ಹೊಂಡಕ್ಕೆ ಇಳಿದು ಎರಡು ನಾಯಿಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಅವುಗಳ ಪ್ರಾಣ ರಕ್ಷಿಸಿದರು.
ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಸ್ಪಂದನೆ ಹಾಗೂ ಕಾರ್ಯಕ್ಷಮತೆಯನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.




