ಅಫಜಲಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ : ಕ್ಯಾಲೆಂಡರ್ ಬಿಡುಗಡೆ

ಅಫಜಲಪುರ: ನಗರದ ಶ್ರೀ ನಿಂಬೆಕ್ಕದೇವಿ ದೇವಸ್ಥಾನದಲ್ಲಿ ಅಕ್ಷರದ ಅವ್ವೆ ಎಂದೇ ಖ್ಯಾತರಾಗಿರುವ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಾಜಶೇಖರ ಮನ್ಮಿ, ಸತೀಶ ಪದಕಿ ಹಾಗೂ ಸುಭಾಷ ಮನ್ಮಿ ಅವರು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಹಾಗೂ ಟ್ರಸ್ಟ್ ಅಧ್ಯಕ್ಷರಾದ ಸಂತೋಷ ಮನ್ಮಿ ವಹಿಸಿ ಮಾತನಾಡಿ, ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಗಾಗಿ ಸಾವಿತ್ರಿಬಾಯಿ ಫುಲೆ ಅವರು ನಡೆಸಿದ ಹೋರಾಟ ಹಾಗೂ ಅವರ ಕೊಡುಗೆಗಳು ಇಂದಿನ ಸಮಾಜಕ್ಕೂ ಪ್ರೇರಣಾದಾಯಕವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ವೇಶ ಲಿಂಬಿತೋಟ, ಶಿವಾನಂದ ಎಸ್. ಕಾಮಗೊಂಡ, ಮಹಾಂತೇಶ ಸರಸಂಬಾ, ಭೀಮಾಶಂಕರ ಕಲ್ಯಾಣಕರ, ವಿಶ್ವನಾಥ ಮಲಘಾಣ, ಮಂಜುನಾಥ ಮನ್ಮಿ, ಮಹಾದೇವ ಲಿಂಬಿತೋಟ, ಸುನಿಲ್ ಯಲ್ದೆ, ವಿಶ್ವರಾದ್ಯ ಪದಕಿ, ಅಯ್ಯಪ್ಪ ಮನ್ಮಿ, ಸಾಮ್ರಾಟ್ ಮನ್ಮಿ ಸೇರಿದಂತೆ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು.
Next Story





