Afzalpur | ಮಣ್ಣೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ

ಅಫಜಲಪುರ : ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಶಾಲಾ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆ ಆಯೋಗದ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸುಗಲಾ ಕುಂಬಾರ (ಶಾಲಾ ನಾಯಕಿ), ಪವನ ಸಾಲೂಟಗಿ (ಶಾಲಾ ಸಾಂಸ್ಕೃತಿಕ ಶಿಕ್ಷಣ ಮಂತ್ರಿ), ಸುಷ್ಮಿತಾ ನಾವಾಡಿ ಕ್ರೀಡಾ ಮಂತ್ರಿ(ಶಾಲಾ ಪ್ರವಾಸೋದ್ಯಮ ಮಂತ್ರಿ), ಅನಸ್ ಸೊರಟೆ (ಶಾಲಾ ಗ್ರಂಥಾಲಯ ಮಂತ್ರಿ), ಪ್ರತಿಕ್ಷಾ ಹರಿಜನ (ಸ್ವಚ್ಛತಾ ಮಂತ್ರಿ), ಐಶ್ವರ್ಯ ನಿವರಗಿ(ಆಹಾರ ಮಂತ್ರಿ, ಸಮರ್ಥ ಕಲಶೆಟ್ಪಿ(ಕುಡಿಯುವ ನೀರು ಮಂತ್ರಿ) ಪ್ರತಿಭಾ ಮಂಗಳೂರ (ಆರೋಗ್ಯ) ವರ್ಷಾ ಹಡಪದ ಶಾಲಾ ಸಂಸತ್ತಿಗೆ ಆಯ್ಕೆಯಾದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆ ಪೂರಕ. ಶಾಲಾ ಸಿಬ್ಬಂದಿ ಜತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಗುರು ನಿಂಗಪ್ಪ ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಿಂಗಣ್ಣ ವಾಗದರಿ, ಮಲ್ಲಿಕಾರ್ಜುನ ಮಾಳಿ, ಭೀಮಣ್ಣ ಬದನೆಕಾಯಿ, ಅಣ್ಣಾ ಸಾಹೇಬ ಮೈಲಗೊಂಡ, ರೇವಣಸಿದ್ದಪ್ಪ ದುದಗಿ, ಯಲ್ಲಪ್ಪ ಪ್ಯಾಟಿ, ಗಂಗಾಧರ ಪೋತದಾರ, ಬಸವರಾಜ ವರನಾಳ, ಕಾವೇರಿ ಹೀರೆಮಠ, ಸವಿತಾ ಕೊಣ್ಣೂರ, ಬೇಬಿ ರಾಠೋಡ, ಮೇಘಾ ತಳವಾರ, ಸವಿತಾ ಕರೂಟಿ, ಕವಿತಾ ಕರೂಟಿ, ರೇಣುಕಾ ದೈತನ ದೈಹಿಕ ಶಿಕ್ಷಕ ಮಾದೇಶ ಬಬಲಾದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು






