Afzalpur | ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ಶಿಶು ಅಭಿವೃದ್ಧಿ ಕಚೇರಿಯ ಹಿರಿಯ ಮೇಲ್ವಿಚಾರಕಿ ಭೇಟಿ

ಅಫಜಲಪುರ : ವ್ಹಿಕೆಜಿ ಸಾಂತ್ವನ ಸಹಾಯವಾಣಿ ಕೇಂದ್ರ, ಅಫಜಲಪುರಕ್ಕೆ ಶಿಶು ಅಭಿವೃದ್ಧಿ ಕಚೇರಿ ಹಿರಿಯ ಮೇಲ್ವಿಚಾರಕಿ ಶಿವಲೀಲಾ ಡೆಂಗಿ ಅವರು ಜೂ.1ರಂದು ಭೇಟಿ ನೀಡಿ ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೇಂದ್ರದಲ್ಲಿ ದಾಖಲಾಗಿರುವ ದೂರುಗಳು, ಅವುಗಳ ನಿರ್ವಹಣೆ ಹಾಗೂ ಸಂತ್ರಸ್ತರಿಗೆ ನೀಡಲಾಗುತ್ತಿರುವ ನೆರವು, ಮಾರ್ಗದರ್ಶನ ಮತ್ತು ಸಮಾಲೋಚನಾ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.
ಸಹಾಯವಾಣಿ ಕೇಂದ್ರವು ಮಹಿಳೆಯರು, ಮಕ್ಕಳು ಹಾಗೂ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ತುರ್ತು ಸಹಾಯ, ರಕ್ಷಣೆ ಮತ್ತು ಅಗತ್ಯ ಸಲಹೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭೇಟಿಯ ವೇಳೆ ಕೇಂದ್ರದ ಕಾರ್ಯದರ್ಶಿ ಎಸ್.ಬಿ.ಅವಟೆ, ಆಪ್ತ ಸಮಾಲೋಚಕರಾದ ಬಸೀರಾ ಗೊಟ್ಯಾಳ ಹಾಗೂ ಸಮಾಜ ಕಾರ್ಯಕರ್ತೆಯರು ಉಪಸ್ಥಿತರಿದ್ದು, ಕೇಂದ್ರದ ಕಾರ್ಯವೈಖರಿ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು ಹಾಗೂ ದೂರುಗಳ ವಿಲೇವಾರಿ ಕುರಿತು ವಿವರಿಸಿದರು.
ಅಧಿಕಾರಿಗಳು ಕೇಂದ್ರದ ಕಾರ್ಯನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆಯೂ ಇದೇ ರೀತಿಯ ಜನಪರ ಸೇವೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸುವಂತೆ ಸಲಹೆ ನೀಡಿದರು.




