Afzalpur | ಶಿಕ್ಷಕರ ಸೇವೆ ಅನನ್ಯ: ಬಸನಗೌಡ ಬಿರಾದಾರ

ಅಫಜಲಪುರ: ತಾಲೂಕಿನ ಅತನೂರ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀಮತಿ ಕನ್ಯಾಕುಮಾರಿ ಪಾಟೀಲ್ ಹಾಗೂ ಶ್ರೀನಿವಾಸ್ ಯಾದವ ಅವರಿಗೆ ಶಾಲೆಯ ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ನೀಡಿ, ನೂತನವಾಗಿ ಆಗಮಿಸಿದ ಶಿಕ್ಷಕರಿಗೆ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಗುರು ಬಸನಗೌಡ ಬಿರಾದಾರ, ವರ್ಗಾವಣೆಗೊಂಡ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಅವರ ಕಾರ್ಯವೈಖರಿ ಶಾಲೆಗೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಶಿಕ್ಷಕರ ಪರಿಶ್ರಮ, ಬದ್ಧತೆ ಹಾಗೂ ಸಮರ್ಪಿತ ಸೇವೆ ಪ್ರಮುಖ ಕಾರಣವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಪಾಟೀಲ್ ಹಾಗೂ ಶ್ರೀನಿವಾಸ್ ಯಾದವ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ವೇಳೆ ಶಾಲೆಗೆ ವರ್ಗಾವಣೆಯಾಗಿ ಆಗಮಿಸಿದ ಶಿಕ್ಷಕರಾದ ಹಣಮಂತ ಸನದಿ ಮತ್ತು ರವಿಚಂದ್ರ ಅತನೂರ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚನ್ನಪ್ಪ ಸಂಖ, ಇರ್ಫಾನಾ ಖಾತೂನ್, ಸರಿತಾ ರಾಥೋಡ್, ಉಮಾಬಾಯಿ, ಹಣಮಂತ ಬಿರಾದಾರ, ಉತ್ತಮಬಾಯಿ, ಸ್ವಾತಿ, ಕವಿತಾ, ಅಂಬಿಕಾ, ಅನ್ನಪೂರ್ಣ, ಭಾಗ್ಯಶ್ರೀ, ಸಾಗರ ಚವ್ಹಾಣ, ಮಾಂತಯ್ಯ ಮಠಪತಿ, ಸಲೀಂ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆನಂದ ಜಾಧವ ನಿರೂಪಿಸಿದರು. ರಾಜೇಶ್ವರಿ ಕುಂಬಾರ ಸ್ವಾಗತಿಸಿದರು. ಶಿವಲೀಲಾ ದೊಡ್ಡಮನಿ ವಂದಿಸಿದರು.






