ಅಫಜಲಪುರ | ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಕಲಬುರಗಿ: ಅಫಜಲಪುರ ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಯೋಗ ದಿನಾಚರಣೆಯನ್ನು ಯೋಗಾಸನಗಳ ಅಭ್ಯಾಸ ಮಾಡಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಗುಂಡದ ಅವರು ಮಾತನಾಡಿ, ಯೋಗ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯಕ್ಕೆ ಸಿದ್ಧ ಔಷಧವಾಗಿದೆ. ಯುವಕರು ಯೋಗ ಮತ್ತು ಧ್ಯಾನವನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಅಧ್ಯಯನದಲ್ಲಿ ಏಕಾಗ್ರತೆಯನ್ನು ದೈಹಿಕವಾದಂತಹ ಸದೃಢತೆಯನ್ನು ಪಡೆಯಬಹುದು ಎಂದು ಹೇಳಿದರು.
ಪ್ರೌಢಶಾಲೆಯ ಇಂಗ್ಲಿಷ್ ಅಧ್ಯಾಪಕ ಶ್ರೀಕಾಂತ ಪಾಟೀಲ್ ಮಾತನಾಡಿದರು.
ದೈಹಿಕ ಶಿಕ್ಷಕರಾದ ಅನಿಲ್ ಹೂನಳ್ಳಿ ಮತ್ತು ಮಲ್ಲಮ್ಮ ಚಿಂಚೋಳಿ ಅವರು ಹತ್ತಾರು ಯೋಗಾಸನಗಳನ್ನು ಅಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಜಮಾದಾರ್, ವೀರನಗೌಡ ಪಾಟೀಲ್, ಗುರುಶಾಂತ ಹೂಗಾರ್, ಶ್ರೀಕಾಂತ ಧೂಳೇ, ಗಂಗಾಧರ ಕಾಂಬಳೆ, ಅಶೋಕ ತಂಬಾಕೆ, ಪ್ರಶಾಂತ ಪಾಟೀಲ್, ಚಿದಾನಂದ ಹಿರೇಮಠ, ಸಿದ್ದು ಬುರ್ಲಿ, ಅರ್ಚನಾ ಕಟ್ಟಿ, ಶೈಲಾ ಬಿರಾದಾರ್ ಉಪಸ್ಥಿತರಿದ್ದರು. ಸತೀಶ ವಾಲಿ ನಿರೂಪಿಸಿ, ವಂದಿಸಿದರು.
Next Story







