Aland | ಭೂಸನೂರಿನಲ್ಲಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ
53 ಜನರಿಂದ ರಕ್ತದಾನ, 400ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

ಆಳಂದ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಲಬುರಗಿ ಜಿಲ್ಲಾ ಶಾಖೆ, ಆಳಂದ ತಾಲೂಕು ಶಾಖೆ ಹಾಗೂ ಎನ್‌ಎಸ್‌ಎಲ್ ಶುಗರ್ಸ್ ಲಿಮಿಟೆಡ್ ಯುನಿಟ್–2, ಭೂಸನೂರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಭೂಸನೂರಿನ ಎನ್‌ಎಸ್‌ಎಲ್ ಶುಗರ್ಸ್ ಆವರಣದಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಎನ್‌ಎಸ್‌ಎಲ್ ಶುಗರ್ಸ್ ಯುನಿಟ್–2ರ ಮುಖ್ಯಸ್ಥ ಪುರುಷೋತ್ತಮ ಎಂ.ಪಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಪ್ಪಾರಾವ್ ಅಕ್ಕೋಣಿ ಹಾಗೂ ಡಾ.ಸಂತೋಷಕುಮಾರ ನಾಗಲಾಪೂರ ಉಪಸ್ಥಿತರಿದ್ದರು.
ಸಭಾಪತಿ ಮಹಾದೇವ ಹತ್ತಿ, ಉಪಸಭಾಪತಿ ಡಾ.ಮೋಹನ ಜಿಡ್ಡಿಮಣಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೈಯದ್ ಸನಾವುಲ್ಲಾ, ದತ್ತಾತ್ರೇಯ ಕುಲಕರ್ಣಿ, ಮಲ್ಲಪ್ಪ ಅಂಕಿ, ಜಂಕಪ್ಪ ಕಾಂಬಳೆ, ಕಾರ್ಯದರ್ಶಿ ಪ್ರಭಾಕರ ಸಲಗರೇ ಹಾಗೂ ಬಾಬುರಾವ್ ಮಡ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಾಲಿಂಗ ಜಮಾದಾರ ನಿರೂಪಿಸಿದರು. ರವೀಂದ್ರ ಶಬಾದಿ ಸ್ವಾಗತಿಸಿದರು. ದೇವೇಂದ್ರ ಮೇಲಕೇರಿ ವಂದನಾರ್ಪಣೆ ಮಾಡಿದರು. ಪತ್ರಕರ್ತರಾದ ಪ್ರಭು ಪಾಟೀಲ ಹಾಗೂ ಮಹೇಶ ಸಾಖರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಬಿರದಲ್ಲಿ ಒಟ್ಟು 53 ಮಂದಿ ರಕ್ತದಾನ ಮಾಡಿದ್ದು, ಸುಮಾರು 400 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಮೂಲಕ ರಕ್ತದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಯಿತು. ಆರೋಗ್ಯವಂತರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವವರ ಜೀವ ಉಳಿಸುವ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.






