ಆಳಂದ | ವಕ್ಫ್ ತಿದ್ದುಪಡಿ ಕಾಯ್ದೆ ರದ್ದತಿಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

ಕಲಬುರಗಿ : ಆಳಂದ ಪಟ್ಟಣದಲ್ಲಿ ಸಂವಿಧಾನ ರಕ್ಷಣಾ ಜನಾಂದೋಲನ ಸಮಿತಿಯ ಆಶ್ರಯದಲ್ಲಿ ಸ್ಥಳೀಯ ದಾರುಲ್ ಉಲೂಮ್ ಬಳಿ ವಕ್ಫ್ ಕಾಯ್ದೆ ತಿದ್ದುಪಡಿ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲಾದ ವಕ್ಪ್ ತಿದ್ದುಪಡಿ ಕಾಯ್ದೆ 2025 ರದ್ದತಿಗೆ ಒತ್ತಾಯಿಸಿ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು, ರದ್ದತಿಗೆ ತಿದ್ದುಪಡಿ ಕಾಯ್ದೆ 2025 ದೇಶದ ಜಾತ್ಯತೀತದ ಮೂಲ ಆಶಯಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದರು. ಈ ಕಾಯ್ದೆಯು ಸಂವಿಧಾನದ ಮೂಲ ಚೌಕಟ್ಟನ್ನು ದುರ್ಬಲಗೊಳಿಸುವ ಉದ್ದೇಶದಿಂದ ರೂಪಿತವಾಗಿದೆ ಎಂದು ಸಮಿತಿಯ ಸದಸ್ಯರು ಟೀಕಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಮೌಲಾ ಮುಲ್ಲಾ, ಆರೀಪ್ ಅಲಿ ಲಂಗಡೆ, ಬಾಖರಲಿ ಜಮಾದಾರ, ಅಹ್ಮೆದ್ ಅಲಿ ಚುಲಬುಲ್, ನ್ಯಾಯವಾದಿ ಎಚ್.ಎಂ.ಪಟೇಲ, ಯೂನುಸ್ ಭಾಗವಾನ, ಮಜರ್ ಹುಸೇನ, ಅಬ್ದುಲ ಸಲಾಂ ಸಗರಿ, ಅಬ್ದುಲ್ ಸತ್ತಾರ್ ಮುರುಮಕರ್, ಸುಲೆಮಾನ್ ಮುಕುಟ್, ಮೌಲಾನಾ ಮುಸ್ತಾಕ್ ಅಹಮದ್, ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ, ಗುಲಾಮಹುಸೇನ ಪಪ್ಪೆವಾಲೆ, ಆಸೀಫ್ ಅನ್ಸಾರಿ, ಇದ್ರೀಸ್ ಅನ್ಸಾರಿ, ರಬ್ಬಾನಿ ಅನ್ಸಾರಿ, ಅನ್ವರ ಹಾಪಿಸಾಬ ಸೇರಿದಂತೆ ಅನೇಕ ಸ್ಥಳೀಯರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಮನವಿಯನ್ನು ಸಲ್ಲಿಸಿದರು. ತಹಶೀಲ್ದಾರರು, ಈ ಮನವಿಯನ್ನು ರಾಷ್ಟ್ರಪತಿಗಳ ಕಚೇರಿಗೆ ತಲುಪಿಸುವ ಭರವಸೆ ನೀಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ, ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ ಘೋಷಣೆಗಳು ಮತ್ತು ಫಲಕಗಳೊಂದಿಗೆ ಜನಾಂದೋಲನದ ಉತ್ಸಾಹವು ಕಾಣಿಸಿತು. ಸ್ಥಳೀಯ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಮತ್ತವರ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು.







