ಆಳಂದ | ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ

ಕಲಬುರಗಿ: ಆಳಂದ ತಾಲ್ಲೂಕಿನ ವಿಧಾನಸಭಾ ಮತಕ್ಷೇತ್ರದ ಎಲೆನಾವದಗಿ ಹಾಗೂ ಬೋಳನಿ ಗ್ರಾಮದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮಂಗಳವಾರ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ಕಾಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮುಖಂಡರಾದ ಬಾಬುರಾವ್ ಕುಲ್ಕರ್ಣಿ, ಜೆಡಿಎಸ್ ಯುವ ಘಟಕದ ಆಳಂದ ತಾಲೂಕು ಅಧ್ಯಕ್ಷರಾಗಿದ್ದ ಶರಣು ಕುಲಕರ್ಣಿ, ಶರಣಬಸಪ್ಪ ಉಜಳಂಬೆ, ಶ್ರೀನಿವಾಸ ರೆಡ್ಡಿ, ರವಿ ಪೂಜಾರಿ, ಶಾಂತಕುಮಾರ್ ಪೂಜಾರಿ, ಸುದೀಪ ನಡಗೇರಿ, ಪ್ರಜ್ವಲ ಕೋಟನೂರು, ಪ್ರಣೀತ ಸನ್ನದೇ, ಶಿವಕುಮಾರ್ ಪೂಜಾರಿ, ಅಪ್ಪು ವಾಗ್ಮರೆ, ಪ್ರಶಾಂತ್, ಶರಣಬಸಪ್ಪ, ಸಂದೀಪ್, ಇರ್ಫಾನ್, ಆಕಾಶ್ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ರುಕ್ಮಣಗೌಡ ಪಾಟೀಲ್, ಶರಣು ಪವಾಡಶೆಟ್ಟಿ, ಸಿದ್ದರಾಮ್ ಕುಲಕರ್ಣಿ, ಮಲ್ಲಿನಾಥ್ ಹತ್ತರಕಿ, ಗಣಪತಿರಾವ್ ಪಾಟೀಲ್,ರಾಜು ಚೌವಣ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಮುನ್ನೊಳ್ಳಿ, ನಂದಕುಮಾರ ಬುಜುರ್ಕೆ, ಸೂರ್ಯಕಾಂತ ಸರಸಂಭಿ ಹಳ್ಳಿಸಲಗರ, ಸುಲ್ತಾನಪ್ಪ ವಗ್ದೂರಗಿ ,ಮಲ್ಲಿಕಾರ್ಜುನ ದೇವಂತಗಿ, ಕಲ್ಯಾಣಿ ಪೂಜಾರಿ ದೇವಂತಗಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.





