ಆಳಂದ | ಪತ್ತಿನ ಸಹಕಾರ ಸಂಘದ ಚುನಾವಣೆ : ಮಾಜಿ ಶಾಸಕ ಸುಭಾಷ್ ಗುತ್ತೇದಾರ ಬೆಂಬಲಿಗರಿಗೆ ಭರ್ಜರಿ ಜಯ

ಕಲಬುರಗಿ: ಆಳಂದ ತಾಲೂಕಿನ ಮಾದನ ಹಿಪ್ಪರ್ಗಾ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿ ಮೆಲುಗೈ ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಅಣ್ಣಾರಾಯ ಸಿದ್ದಣ್ಣಾ ಪಾಟೀಲ್, ಭೀಮಶ್ಯಾ ಹಣಮಂತಪ್ಪ ಅಂಜುಟಗಿ, ಗುರುನಾಥ ಹಣಮಂತ ಕೋಲಶೆಟ್ಟಿ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಾಗಮ್ಮ ಮಹಾರುದ್ರಪ್ಪ ಮಡಿವಾಳ, ಮಥುರಾಬಾಯಿ ಶಂಕರ ದುದ್ಧಗಿ, ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಧರ್ಮಣ್ಣಾ ಸೀತಾರಾಮ ಜಮಾದಾರ, ಸಾಲಗಾರರ ಹಿಂದುಳಿದ ವರ್ಗ ಅ ಕ್ಷೇತ್ರದಿಂದ ಕಲ್ಯಾಣಪ್ಪ ಗುರುಬಸಪ್ಪ ಗುಳಗಿ, ಸಾಲಗಾರರ ಹಿಂದುಳಿದ ವರ್ಗ ಬ ಕ್ಷೇತ್ರದಿಂದ ಶಿವಶಾಂತ ಮಾಣಿಕರಾವ ಕುಲಕರ್ಣಿ ಅವರು ಚುನಾವಣೆಯಲ್ಲಿ ಬಹುಮತ ಪಡೆದು ಮಾಜಿ ಶಾಸಕ ಗುತ್ತೇದಾರ ಬೆಂಬಲಿಗರ ಪಡೆಯಿಂದ ಆಯ್ಕೆಯಾಗಿದ್ದಾರೆ.
ರವಿವಾರ ನಡೆದ 12 ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 9 ಜನ ನಿರ್ದೇಶಕರು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಬೆಂಬಲಿಗರು ಗೆಲುವಿನ ನಗೆ ಬೀರಿದರು. ಗೆಲುವಿನ ನಂತರ ಅಭ್ಯರ್ಥಿಗಳು, ಬೆಂಬಲಿಗರು ಮತ್ತು ಮುಖಂಡರು ವಿಜಯೋತ್ಸವ ಆಚರಿಸಿದರು.
ಗೆಲುವಿಗೆ ಕಾರಣರಾದ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲ ಸದಸ್ಯರಿಗೆ, ಕಾರ್ಯರ್ತರಿಗೆ, ಮುಖಂಡರಿಗೆ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ, ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್.ಗುತ್ತೇದಾರ ಧನ್ಯವಾದ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೂತನ ನಿರ್ದೇಶಕರು ರೈತರ ಏಳಿಗೆಯ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಿ ಸಂಘವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.







