ಆಳಂದ | ಜೋತಿಬಾ ಫುಲೆ ಭವನ ನಿರ್ಮಾಣಕ್ಕೆ ಒತ್ತಾಯ

ಆಳಂದ: ಹೆಚ್ಚಿನ ಸಂಖ್ಯೆಯಲ್ಲಿರುವ ಮಾಳಿಮಾಲಗಾರ ಸಮುದಾಯ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಫುಲೆ ಭವನ ಸೇರಿದಂತೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ಸ್ಥಳೀಯ ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಮಾಳಿ ಮಾಲಗಾರ ಶ್ರೇಯೋಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಗಣೇಶ ಪಾಟೀಲ ಅವರು ಒತ್ತಾಯಿಸಿದರು.
ಪಟ್ಟಣದ ಲಿಂಗಾಯತ್ ಭವನದಲ್ಲಿ ತಾಲೂಕು ಮಾಳಿ ಮಾಲಗಾರ ಶ್ರೇಯೋಭಿವೃದ್ಧಿ ಸಂಘಕ್ಕೆ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರ ಮಟ್ಟದಲ್ಲಿನ ನ್ಯಾಯಯುತ ಬೇಡಿಕೆ ಹಾಗೂ ಹಕ್ಕಿಗಾಗಿ ಸಮಾಜ ಬಾಂಧವರು ಒಗ್ಗೂಡುವ ಕಾಲವಿದು, ತಾಲೂಕು ಕೇಂದ್ರದಲ್ಲಿ ಸಮಾಜದ ವತಿಯಿಂದ ಒಂದು ನಿವೇಶನ ಪಡೆದು ಫುಲೆ ಭವನ ನಿರ್ಮಿಸಲು ಸರ್ಕಾರಕ್ಕೆ ನಿವೇಶನ ಹಾಗೂ ಅನುದಾನ ನೀಡುವಂತೆ ಸಮಾಜದ ಬಹುದಿನಗಳ ಬೇಡಿಕೆಯಾಗಿದೆ. ಇದಕ್ಕಾಗಿ ಒಗ್ಗೂಡಿ ಕೆಲಸ ಮಾಡಲು ಸರ್ವರು ಕೈಜೋಡಿಸಬೇಕು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸುಭಾಷ ಬಳೂರ್ಗಿ ಮಾತನಾಡಿದರು.
ಅಧ್ಯಕ್ಷರಾಗಿ ಗಣೇಶ್ ಪಾಟೀಲ್ ಹಡಲಗಿ, ಉಪಾಧ್ಯಕ್ಷರಾಗಿ ಸಿದ್ಧರಾಮ ತೋಳನೂರ ಮಾದನಹಿಪ್ಪರಗಾ, ಗುರುನಾಥ ಜಂದೆ ಯಳಸಂಗಿ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ ಬಳೂರ್ಗಿ ಆಳಂದ, ಸಹ ಕಾರ್ಯದರ್ಶಿಯಾಗಿ ವೀರೇಶ್ ಪಾಟೀಲ್, ಖಜಾಂಚಿಯಾಗಿ ಚಂದ್ರಕಾoತ ಭೀಕಮಾಳೆ ಸರಸಂಬಾ, ಸದಸ್ಯರನ್ನಾಗಿ ಗುರುನಾಥ ಧುಳೆ, ಅಶೋಕ ಇಟಾಮಳೆ, ಮಲ್ಲಿಕಾರ್ಜುನ ಎ. ವಣದೇ, ವಿಶ್ವನಾಥ ಧುಳೆ ಕಿಣ್ಣಿ ಸುಲ್ತಾನ್, ಶರಣಪ್ಪ ಶೇರಿಕಾರ ಹಿರೋಳಿ, ಬಸವರಾಜ ಮೆತ್ರಿ ನಾಗಾಲೆಗಾಂವ, ಸಿದ್ಧರಾಜ ಆಲೂರೆ ಮಾದನಹಿಪ್ಪರಗಾ, ಸಂತೋಷ ಸವಳೆ ಯಳಸಂಗಿ, ಸಿದ್ಧರಾಮ ಆಳಂದ ಮಾಡ್ಯಾಳ, ಶ್ರೀಕಾಂತ ಶ್ರೀಗಣಿ ಮಾಡ್ಯಾಳ, ಲಕ್ಷ್ಮಿಕಾಂತ ಹೇಬಳಿ ಲಾಡಚಿಂಚೋಳಿ, ಸಿದ್ಧರಾಮ ಮುನ್ನೊಳ್ಳಿ ಪಡಸಾವಳಿ, ಶ್ರೀಶೈಲ ಮಾಡ್ಯಾಳೆ ಸರಸಂಬಾ, ಅವರುಗಳನ್ನು ಆಯ್ಕೆ ಮಾಡಲಾಯಿತು.







