ಆಳಂದ | ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಶಾಲಾ ಮಕ್ಕಳಿಂದ ಗೌರವ

ಕಲಬುರಗಿ: ಆಳಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದ.ಬ್ರೀಜ್ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಗೆ ಭೇಟಿ ನೀಡಿ, ಸರ್ವ ವೈದ್ಯರನ್ನು ಹೂ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೈದ್ಯರನ್ನು ಗೌರವದಿಂದ ಸ್ಮರಿಸಿದರು. ಎಲ್ಲಾ ವೈದ್ಯರ ತ್ಯಾಗ ಮತ್ತು ಸೇವೆಗೆ ಕೃತಜ್ಞತೆ ಸಲ್ಲಿಸುವ ಮೂಲಕ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.
ಆಸ್ಪತ್ರೆಯ ಹಿರಿಯ ವೈದ್ಯ ಡಾ.ಉಮಾಕಾಂತ, ಡಾ.ಪ್ರಮೊದ್, ಡಾ.ಅಮರ್, ಡಾ.ಇರ್ಫಾನ ಸೇರಿ ಇನ್ನಿತರ ವೈದ್ಯರಿಗೆ ಮಕ್ಕಳು ಸರ್ವ ವೈದ್ಯರಿಗೂ ಹೂ ನೀಡಿ ಶುಭ ಕೋರಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ರಿಡ್ಜ್ ಸ್ಕೂಲ್‍ನ ಪ್ರಧಾನ ಶಿಕ್ಷಕ ಮಹೇಶ್ ಪಾಟೀಲ್ ಮಾತನಾಡಿದರು. ಮನೋವೈದ್ಯ ಶಾಸ್ತ್ರಜ್ಞ ಡಾ.ಇರ್ಫಾನ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದ.ಬ್ರೀಜ್ ಶಾಲೆಯ ಸಂಸ್ಥೆಯ ಅಧ್ಯಕ್ಷ ರಫೀಕ್ ಇನಾಮದಾರ, ಮುಖ್ಯ ಶಿಕ್ಷಕ ಜಗದೀಶ ಕೋರೆ ಮಕ್ಕಳ ಜೊತೆಯಲ್ಲಿದ್ದರು.





