ಆಳಂದ | ಸಂತ ವೇಮನ ಜಯಂತಿ ಆಚರಣೆ

ಆಳಂದ : ಸಂತ ವೇಮನರ ಕವಿತೆಗಳು ನಮ್ಮ ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಅವರು ಸಾಮಾಜಿಕ ಅಸಮಾನತೆ, ಅಜ್ಞಾನ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಇಂದಿನ ಯುವಕರು ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜವನ್ನು ಮುನ್ನಡೆಸಬೇಕು ಎಂದು ರೆಡ್ಡಿ ಸಮಾಜದ ಅಧ್ಯಕ್ಷ ಹಾಗೂ ರಾಜಶೇಖರ್ ಮಹಾಸ್ವಾಮಿಗಳ ಬಿಎಡ್ ಕಾಲೇಜಿನ ಪ್ರಾಚಾರ್ಯ ಅಶೋಕ ರೆಡ್ಡಿ ಹೇಳಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ಸಂತ ಹಮ್ಮಿಕೊಂಡ ಸಂತ ವೇಮನ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರ ಮಾತನಾಡಿ, ಸಂತ ವೇಮನರ ಆದರ್ಶಗಳು ಸಮಾಜದ ಏಕತೆಗೆ ಮಾರ್ಗದರ್ಶನ ನೀಡುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುಂಡಲಿಕ ಸಾಧು, ರೈತ ಶಿವಾನಂದ ರೆಡ್ಡಿ, ಮಲ್ಲಿಕಾರ್ಜುನ್ ಕುಸೇ, ಭೀಮರಾವ್ ಪಡಸಾವಳಗಿ, ಅಶೋಕ ರೆಡ್ಡಿ, ಸಾಧು ಚಂದ್ರಶೇಖರ್ ರೆಡ್ಡಿ, ಯಲ್ಲಾಲಿಂಗ ಪಾಟೀಲ್, ಸುದರ್ಶನ್ ರೆಡ್ಡಿ, ಸಿದ್ದಲಿಂಗ ರೆಡ್ಡಿ, ಸಾಧು ಶರಣಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.





