ಆಳಂದ | ಕಳ್ಳತನ ಪ್ರಕರಣ : ಇಬ್ಬರ ಬಂಧನ, 1.18 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

ಕಲಬುರಗಿ : ಆಳಂದ ಪಟ್ಟಣದ ಬಸ್ ನಿಲ್ದಾಣ ಸೇರಿ ಸಂತೆಯಲ್ಲಿ ಬುರ್ಖಾ ಧರಿಸಿಕೊಂಡು ಅಮಾಯಕ ಮಹಿಳೆಯರ ಹಣ, ಒಡವೆಗಳನ್ನು ದೂಚ್ಚುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಆಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಲಬುರಗಿ ಬಾಪುನಗರದ ನಿವಾಸಿ ವ್ಯಾಪಾರಿ ಸರಿತಾ (32) ಮತ್ತು ಕಲಬುರಗಿ ನಾಗನಳ್ಳಿ ಕ್ರಾಸ್ ನಿವಾಸಿ ಬಟ್ಟ ವ್ಯಾಪಾರಿ ಕರುಣಾನಿಧಿ (30) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕೆ ಒಳಪಡಿಸಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1.18ಲಕ್ಷ ರೂ. ಮೌಲ್ಯದ ಮುದ್ದೆಮಾಲು ಸೇರಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಸ್ ಹತ್ತುವಾಗ ಇಳಿಯುವಾಗ ಅಮಾಯಕ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರ ಓಡವೆ, ಹಣ ದೂಚ್ಚುತ್ತಿದ್ದ ಈ ಕಳ್ಳಿಯರು ಕೊನೆಗೂ ಪೊಲೀಸ್ ಅತಿಥಿಯಾಗಿದ್ದು, ಸೋಮವಾರ ಬಸ್ ನಿಲ್ದಾಣದಲ್ಲೇ ಕೃತ್ಯ ಎಸುಗುವಾಗ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಂದ 7 ಗ್ರಾಂ ಚಿನ್ನದ ಓಡವೆ, 73,000 ರೂ. ಹಣ ಸೇರಿ ಒಟ್ಟು 1.18 ಲಕ್ಷ ರೂ. ಮೌಲ್ಯದ ಮುದ್ದೆಮಾಲು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಳ್ಳಿಯರ ಬಂಧನ ಕಾರ್ಯಾಚರಣೆಗೆ ಡಿವೈಎಸ್ಪಿ ಗೋಪಿ ಬಿ.ಆರ್. ಮಾರ್ಗದರ್ಶನದಲ್ಲಿ ಆಳಂದ ಠಾಣೆಯ ಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಪಿಎಸ್ಐ ಭೀಮಾಶಂಕರ ಬಂಕ್ಲಿ, ತನಿಖಾ ವಿಭಾಗದ ಪಿಎಸ್ಐ ಸಂಜೀವ ರೆಡ್ಡಿ, ಸಿಬ್ಬಂದಿಗಳಾದ ಯುವರಾಜ, ಮುಹಿಬೂಬ ಶೇಖ, ಚಂದ್ರಶೇಖರ, ಗಣಪತಿರಾವ ಘಂಟೆ, ಸಚೀನ್ ಜಾಕೀರ, ವೆಂಕಟರಾವ್, ಸಿದ್ಧರಾಮ,ಮೌಲಾಲಿ ಅವರ ತಂಡವು ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.







