ಆಳಂದ | ಮಾಜಿ ಸಚಿವ ಭೀಮಣ್ಣ ಖಂಡ್ರೆಗೆ ಶ್ರದ್ಧಾಂಜಲಿ

ಆಳಂದ : ಶುಕ್ರವಾರ ಸಂಜೆ ನಿಧನರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ವೀರಶೈವ ಲಿಂಗಾಯತ್ ಮಹಾಸಭಾ ತಾಲೂಕು ಘಟಕದ ಆಶ್ರಯದಲ್ಲಿ ಸಮಾಜ ಬಾಂಧವರು ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಪಟ್ಟಣದ ಬಸ್ ನಿಲ್ದಾಣ ಬಳಿಯ ವೀರಶೈವ ಲಿಂಗಾಯತ ಮಹಾಸಭಾ ಪ್ರಾಂಗಣದಲ್ಲಿನ ವಿಶ್ವಗುರು ಬಸಣ್ಣಣವರ ಪ್ರತಿಮೆ ಬಳಿ ಲಿಂ. ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀಮಣ್ಣ ಖಂಡ್ರೆ ಅವರ ವ್ಯಕ್ತಿತ್ವನ್ನು ಸ್ಮರಿಸಿದ ಮುಖಂಡರು, ಆಳಂದ ತಾಲೂಕಿನ ಸಮಾಜಿಕ, ರಾಜಕೀಯವಾಗಿ ಬಹು ಹತ್ತಿರದ ನಂಟು ಹೊಂದಿದ್ದರು. ಅವರ ಜನಪರ ಮತ್ತು ಸಮಾಜಪರ ಕಾಳಜಿಯುಳ್ಳ ನಾಯಕತ್ವದೊಂದಿಗೆ ಯುವ ಸಮುದಾಯಕ್ಕೆ ಮಾದರಿ ವ್ಯಕ್ತಿತ್ವನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಅಗಲಿಕೆಗೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ಶ್ರೀಶೈಲ ಖಜೂರಿ ಮತ್ತು ಸಿದ್ಧು ಪಾಟೀಲ ಮೋಘಾ, ನ್ಯಾಯವಾದಿ ಮಹಾದೇವ ಹತ್ತಿ ಅವರು ಹೇಳಿದರು.
ಮಹಾಸಭಾ ಕಾರ್ಯದರ್ಶಿ ಕಲ್ಲಪ್ಪ ಹತ್ತರಕಿ, ಹಿರಿಯ ಮುಖಂಡ ಮಲ್ಲಪ್ಪ ಹತ್ತರಕಿ, ಮಲ್ಲಿಕಾರ್ಜುನ ಕಂದಗುಳೆ, ಶ್ರೀಶೈಲ ಹತ್ತರಕಿ, ಬಸವಸೇನೆ ತಾಲೂಕು ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಳಿ ಸಮಾಜ ಅಧ್ಯಕ್ಷ ಪಂಡಿತ ಶೇರಿಕಾರ, ವಿಎಸ್‌ಎಸ್‌ಎನ್ ಅಧ್ಯಕ್ಷ ಭಾರತ ಪಾಟೀಲ, ಭೂವಿ ಸಮಾಜದ ಕನಕಪ್ಪ ದಂಡಗುಲೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ವಾಡೆ, ಪಂಚಮಸಾಲಿ ಸಮಾಜ ಅಧ್ಯಕ್ಷ ಆನಂದ ಎಸ್. ದೇಶಮುಖ, ಸಂತೋಷ ವಾಲೆ, ಬಾಬುರಾವ್ ಗೊಬ್ಬರೆ ಭೂಸನೂರ, ಚನ್ನಪ್ಪ ಹತ್ತರಕಿ, ರಾಮ ಹತ್ತರಕಿ, ಸಿದ್ಧು ಶೇಖಾಪೂರ, ಶಿವರಾಯ ಸರಸಂಬಿ ಮತ್ತಿತರು ಉಪಸ್ಥಿತರಿದ್ದು ಖಂಡ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಗಣ್ಯರ ಸಂತಾಪ :
ಶತಾಯುಷಿ ಭೀಮಣ್ಣ ಖಂಡ್ರೆ ಅವರ ಅಗಲಿಕೆಗೆ ಶಾಸಕ ಬಿ.ಆರ್.ಪಾಟೀಲ್, ಮಾಜಿ ಶಾಸಕ ಸುಭಾಷ ಗುತ್ತೇದಾರ್, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳಿ, ಪಂಚಗ್ಯಾರಂಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಹೋರಾಟಗಾರ ರಮೇಶ ಲೋಹಾರ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಬಂಜಾರಾ ಸಮಾಜದ ರಾಜು ಚವ್ಹಾಣ, ಸುಭಾಷ ಫೌಜಿ, ಗುತ್ತಿಗೆದಾರ ರೇವಣಸಿದ್ಧಪ್ಪ ನಾಗೂರೆ, ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೆಯ ಕುಡಕಿ, ಬಾಬುರಾವ್ ಅರುಣೋದಯ, ಹಿರಿಯ ದಯಾನಂದ ಶೇರಿಕಾರ, ಬಿಜೆಪಿ ಮುಖಂಡ ಅಶೋಕ ಹತ್ತರಕಿ, ಬಸವರಾಜೇಂದ್ರ ಗುಂಡೆ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.







