ಆಳಂದ | ಸಂಭ್ರಮದಿಂದ ವಿಜಯದಶಮಿ ಆಚರಣೆ

ಕಲಬುರಗಿ: ಅತಿವೃಷ್ಟಿ ಅನಾವೃಷ್ಟಿ ನಡುವೆ ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿಜಯದಶಮಿ ಹಬ್ಬವನ್ನು ಭಕ್ತಿಭಾವ ಮತ್ತು ಸಂಭ್ರಮದಿoದ ಎಂದಿನಂತೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಪಟ್ಟಣದ ಎಚ್.ಕೆ. ಡಿಗ್ರಿ ಕಾಲೇಜು ಬಳಿ ಸಂಜೆ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಗ್ರೇಡ್-2 ತಹಶೀಲ್ದಾರ್ ಬಿ.ಜಿ.ಕುದರಿ ಅವರು ಚಾಲನೆ ನೀಡಿದರು. ಆರ್ಯ ಸಮಾಜ ಮಂದಿರದಿಂದ ಸಾಂಪ್ರದಾಯಿಕ ಮೆರವಣಿಗೆಯನ್ನು ಹನುಮಾನ ಮಂದಿರ ಮೂಲಕ ಡಿಗ್ರಿಕಾಲೇಜುವರೆಗೆ ನಡೆದ ಬನ್ನಿ ವಿನಿಮಯಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ ದೇವಿಯ ಮೂರ್ತಿಗಳನ್ನು ಅಲಂಕರಿಸಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ದೇವಿಯ ದರ್ಶನ ಪಡೆದು ಭಕ್ತಿಭಾವದಿಂದ ಪ್ರಾರ್ಥಿಸಿದರು.
ಹಬ್ಬದ ಅಂಗವಾಗಿ ಸಾರ್ವಜನಿಕರು ಪರಸ್ಪರ ಗುರು-ಹಿರಿಯರು, ಸ್ನೇಹಿತರು ಮತ್ತು ಬಂಧು-ಬಾಂಧವರಿಗೆ ಬೆಳ್ಳಿ-ಬಂಗಾರ ರೂಪದಲ್ಲಿ ಬನ್ನಿ ನೀಡಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪಟ್ಟಣದ ಎ.ವಿ.ಪಾಟೀಲ ಡಿಗ್ರಿ ಕಾಲೇಜು ಬಳಿ ಸಾಂಪ್ರದಾಯಿಕ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಶರಣಬಸಪ್ಪ ಪಾಟೀಲ, ಪುರಸಭೆ ಸದಸ್ಯ ಈರಣ್ಣಾ ಹತ್ತರಕಿ, ಖಜೂರಿ ನಾಡ್ ತಹಹಸೀಲ್ದಾರ ಗುರುಲಿಂಗಯ್ಯಾ ಸ್ವಾಮಿ, ಗ್ರಾಮಾಡಳಿತ ಹಿರಿಯ ಅಧಿಕಾರಿ ಶರಣಬಸಪ್ಪ ಹಕ್ಕಿ, ಆನಂದ ಪೂಜಾರಿ, ಸಂಜಯ ಮಿಸ್ಕಿನ್ ಸೇರಿದಂತೆ ವಿವಿಧ ಸಮಾಜ ಸಂಘಟನೆಗಳ ಪ್ರಮುಖರು ಮತ್ತು ಸಾರ್ವಜನಿಕರು ಭಾಗವಹಿಸಿ ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಷಯ ಕೊರಿಕೊಂಡರು.
ಗ್ರಾಮೀಣ ಭಾಗದಲ್ಲೂ ಖಜೂರಿ, ನಿಂಬರಗಾ, ನರೋಣಾ, ಮಾದನಹಿಪ್ಪರಗಾ ಗ್ರಾಮ ಹಬ್ಬವನ್ನು ಆಚರಿಸಲಾಯಿತು.







