ಆಳಂದ | ಬಲಿಷ್ಠ ಸಮಾಜ ನಿರ್ಮಾಣಕ್ಕೆ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು: ದತ್ತಾತ್ರೇಯ ಕುಡಕಿ

ಕಲಬುರಗಿ: ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಜನರ ಮನದಾಳದಲ್ಲಿ ಬಿತ್ತಿ, ಆರೋಗ್ಯಪೂರ್ಣ ಬಲಿಷ್ಠ ನವಸಮಾಜ ಕಟ್ಟುವ ಸಂಕಲ್ಪಕ್ಕೆ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಕಾರ್ಯಕರ್ತರಿಗೆ ಕರೆ ನೀಡಿದರು.
ಆಳಂದ ಪಟ್ಟಣದಲ್ಲಿ ಮಂಗಳವಾರ ಕರೆದ ಅಖಿಲ ಕರ್ನಾಟಕ ದಲಿತ ಸೇನೆಯು ಕಾರ್ಯಕರ್ತರ ಸಭೆಯಲ್ಲಿ ಆಯ್ಕೆಯಾದ ತಾಲೂಕು ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ಹಲವು ಅನುಕ್ಷೇದಗಳು ಅಳವಡಿಸಿದ್ದಾರೆ. ಆದರೆ, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಕ್ಷಪಾತ ನೀತಿಯಿಂದಾಗಿ ಈ ಅನುಕ್ಷೇದಗಳು ಸರಿಯಾಗಿ ಜಾರಿಯಾಗದೆ, ದಲಿತ ಸಮುದಾಯವನ್ನು ಕತ್ತಲೆಯಲ್ಲಿ ಇಡಲಾಗುತ್ತಿದೆ ಎಂದು ಆರೋಪಿಸಿದರು.
ಸೇನೆಯ ರಾಜ್ಯ ಗೌರವಾಧ್ಯಕ್ಷ ಆನಂದರಾಯ ಗಾಯಕವಾಡ ಮತ್ತು ಅಧ್ಯಕ್ಷತೆ ವಹಿಸಿದ್ದ ಹಿರಿಯ ಬಸವಲಿಂಗಪ್ಪ ಗಾಯಕವಾಡ ಅವರು ಸಭೆಯನ್ನುದ್ದೇಶಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಆಳಂದ ತಾಲೂಕು ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಭೋಜರಾಜ ಟಿ ಜುಭ್ರೆ (ಅಧ್ಯಕ್ಷ), ಬಸವರಾಜ ಕಾಂಬಳೆ (ಉಪಾಧ್ಯಕ್ಷ), ದತ್ತಾ ಕೋಚ್ಚಿ (ಉಪಾಧ್ಯಕ್ಷ), ದೇವಿಂದ್ರ ಹಂಗರಗಿ (ಉಪಾಧ್ಯಕ್ಷ), ದಿಗಂಬರ ಮಂಟಕಿ (ಉಪಾಧ್ಯಕ್ಷ), ಜೈಕಾಂತ ವಾಘಮೋರೆ (ಪ್ರಧಾನ ಕಾರ್ಯದರ್ಶಿ), ರಾಜು ಸಿಂಗೆ ನಿಂಬರ್ಗಾ (ಕಾರ್ಯದರ್ಶಿ), ಪ್ರವೀಣ ತಡೋಳಾ (ಸಹ ಕಾರ್ಯದರ್ಶಿ),. ರವಿ ಮೇಲಿನಕೇರಿ (ಸಂಘಟನಾ ಕಾರ್ಯದರ್ಶಿ), ದೀಲಿಪ ಭಂಡಾರೆ ಜೀರೋಳಿ (ಖಜಾಂಚಿ), ಸಿದ್ದು ನಾವದಗಿ (ವೀಕಲಚೇತನರ ಅಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಾಳಪ್ಪ ತಳೇಕರ್, ಮಹಾದೇವ ಜಿಡ್ಡೆ, ಕಲ್ಯಾಣಿ ದೊಡ್ಮನಿ, ನಾಗರಾಜ ಭಾವಿಮನಿ, ಶಶಿಕಾಂತ ಕಾಳೆಕಿಂಗೆ, ಸಜೀವಕುಮಾರ ಕಾಂಬಳೆ, ಸಂಜಯಕುಮಾರ ಧೂಳೆ, ಮರೆಪ್ಪ ಜಿಂಗೆ, ಖಾಜಪ್ಪ ಜಿಂಗೆ, ಶರಣಪ್ಪ ದೇವನೂರೆ, ಲಕ್ಷಣ ನಡಗೇರಿ, ಸಂದೀಪ ಜಮಾದಾರ, ಅಶೋಕ ಗಾಯಕವಾಡ, ಆಕಾಶ ವಾಘಮೋರೆ, ಶಾಮರಾವ ನಿಂಬರ್ಗಾ, ಚಿದಾನಂದ, ಶರಣಬಸಪ್ಪ ಹೆಡೆ ಮತ್ತಿತರು ಪಾಲ್ಗೊಂಡಿದ್ದರು.







