ಸೇಡಂನಲ್ಲಿ ಅಂಬೇಡ್ಕರ್ ಜಯಂತಿ : ಸಚಿವ ಡಾ.ಶರಣಪ್ರಕಾಶ್ ಪಾಟೀಲರಿಂದ ಮಾಲಾರ್ಪಣೆ

ಸೇಡಂ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸೇಡಂ ಪಟ್ಟಣದಲ್ಲಿ ಅಂಬೇಡ್ಕರ್ ಮೂರ್ತಿಗೆ ಗೌರವಪೂರ್ವಕವಾಗಿ ಮಾಲಾರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ತರುವಲ್ಲಿ ಬಾಬಾ ಸಾಹೇಬರ ಅವಿರತ ಶ್ರಮದಿಂದಲೇ ದೇಶದಲ್ಲಿ ಸಾಂವಿಧಾನಿಕ ಸಮಾನತೆ ಸ್ಥಾಪನೆ ಸಾಧ್ಯವಾಯಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಉಡಗಿ, ಶಿವಶರಣ ರೆಡ್ಡಿ ಪಾಟೀಲ್, ವಿಶ್ವನಾಥ್ ಪಾಟೀಲ್ ಬೊಮ್ಮನಹಳ್ಳಿ, ಕಾಂಗ್ರೆಸ್ ಮುಖಂಡ ಜೈ ಭೀಮ್ ಉಡಗಿ, ಸಿಪಿಐ ಮುಖಂಡ ಮಹಾದೇವ ದಿಡಿಮನಿ, ಅಂಬೇಡ್ಕರ್ ಜಯಂತಿ ಸಮಿತಿ ಅಧ್ಯಕ್ಷ ಗೌತಮ್ ಹಳ್ಳಿ, ವಿಲಾಸ್ ಗೌತಮ್ ನೀಡಗುಂದಾ, ಮಾರುತಿ ಹುಳಗೋಳಕರ, ಬಸವರಾಜ ಕಾಳಗಿ, ಸಿದ್ದು ಡೋಣುರ, ಶ್ರೀಕಾಂತ್ ಜಾಪನೂರ ಸೇರಿದಂತೆ ಅನೇಕ ಮುಖಂಡರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Next Story




