ಜೀವನ ನಡೆಸಲು ಬಸವಣ್ಣನವರು ದಾರಿದೀಪ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ: ಜೀವನದಲ್ಲಿ ಹೇಗೆ ಬದುಕಬೇಕು ಎಂದು ಬಸವಣ್ಣನವರು ನಮಗೆ ಮಾರ್ಗದರ್ಶನ ಮಾಡಿಕೊಟ್ಟು ಹೋಗಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಅವರು ಚಿಂಚೋಳಿ ಪಟ್ಟಣದ ವೈಜನಾಥ ಪಾಟೀಲ ಕಲ್ಯಾಣ ಮಂಟಪದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ 892ನೇ ಜಯಂತ್ಸೋತ್ಸವದ ನೇತೃತ್ವ ವಹಿಸಿ ಮಾತನಾಡಿದರು.
ಬೀದರ್ ಸಂಸದ ಸಾಗರ್ ಖಂಡ್ರೆ ಮಾತನಾಡಿ, ಬಸವಣ್ಣವರು ವಿಶ್ವಕ್ಕೆ ವಿಶ್ವಗುರು ಆಗಿದ್ದಾರೆ. ಅವರ ಜಯಂತಿ ರಾಜ್ಯಮಟ್ಟದಲ್ಲಿ, ರಾಷ್ಟ್ರೀಯಮಟ್ಟದಲ್ಲಿ ಆಚರಣೆಯಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಹುಸೂರ ಶ್ರೀಗುರು ಸಬವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿಗಳು, ಶಿವುಕುಮಾರ ಸ್ವಾಮಿಗಳು, ಶಾಸಕ ಡಾ.ಅವಿನಾಶ್ ಜಾಧವ್ ಮಾತನಾಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ, ಜಯಂತೋತ್ಸವದ ಅಧ್ಯಕ್ಷ ನೀಲಕಂಠ ಸೀಳಿನ್, ಗೌತಮ ಪಾಟೀಲ, ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಬಸವರಾಜ ಸಜ್ಜನ, ಲಕ್ಷ್ಮಣ ಆವುಂಟಿ, ಶರಣು ಮೇಡಿಕಲ್, ಅಬ್ದುಲ್ ಬಾಸೀದ್, ಸಂಜಕುಮಾರ ಪಾಟೀಲ, ಕೆ.ಎಮ್.ಬಾರಿ, ಸುರೇಶ ದೇಶಪಾಂಡೆ, ಚಿತ್ರಶೇಖರ ಪಾಟೀಲ, ರಮೇಶ ದೇಸಾಯಿ ಸುಲೇಪೇಟ ಸೇರಿದಂತೆ ಮತ್ತಿತರರು ಇದ್ದರು.
ಶರಣು ಪಾಟೀಲ ಮೋತಕಪಳ್ಳಿ ಸ್ವಾಗತಿಸಿದರು, ಮಲ್ಲಿಕಾರ್ಜುನ ಪಾಲಾಮೂರ್ ನಿರೂಪಿಸಿದರು.





