ಕಲಬುರಗಿಯ ವಿವಿಧೆಡೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧ ತಾಲೂಕು, ಹೋಬಳಿಗಳಲ್ಲಿ 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಯಿತು.
ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ವಿವಿಧ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಇದೇ ಆವರಣದಲ್ಲಿರುವ ಭೀಮಾ ಕೋರೆಗಾಂವ್ ಸ್ಮಾರಕಕ್ಕೆ ವಿವಿಧ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಭೀಮ್ ಆರ್ಮಿ, ದಲಿತ ಸಂಘರ್ಷ ಸಮಿತಿ, ಮಾದಿಗ ಸಮುದಾಯದ ಒಕ್ಕೂಟದ ಸಂಘಟನೆಗಳು ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪ್ರಮುಖ ಮುಖಂಡರು ಅನ್ನ ಸಂತರ್ಪಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದರು.
ಈ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ಉತ್ಸವ ಸಮಿತಿಯ ಅಧ್ಯಕ್ಷ ಭೀಮಾ ವಿಶಾಲ ನವರಂಗ, ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ಸಂಘಟನೆಯ ರಾಜ್ಯಾಧ್ಯಕ್ಷ ಮುಖಂಡ ಎಸ್.ಎಸ್.ತಾವಡೆ, ದೇವೇಂದ್ರ ಸಿನ್ನೂರ್, ಕಿಶೋರ ಗಾಯಕವಾಡ, ನಾಗರಾಜ ಗಾಯಕವಾಡ, ಮಾದಿಗ ಸಮುದಾಯದ ಮುಖಂಡ ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜೀನಕೇರಿ, ಮಲ್ಲಿಕಾರ್ಜುನ್ ದೊಡ್ಮನಿ, ಬಂಡೇಶ್ ರತ್ನಡಗಿ, ಸಚಿನ್ ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ಪ್ರಕಾಶ್ ಗುಲ್ಲವಾಡಿ, ಶಿವರಾಜ್ ಬೆಳಗುಂದಿ, ದತ್ತು ಹಯ್ಯಳ್ಕರ್, ಕೃಷ್ಣ ತಂಗಡಗಿ, ಚಂದಪ್ಪ ಕಟ್ಟಿಮನಿ, ಅಮೃತ್ ಕೊರಳ್ಳಿ, ದತ್ತು ಶಿವರುದ್ರ, ಪ್ರೇಮ್ ರನ್, ಶಿವಶಂಕರ್ ಬಂದರವಾಡ, ಅಮೃತ್ ಕೊರಳಿ, ದೇವು ವಾಲಿಕರ್, ಅರ್ಜುನ್ ಎನ್.ಕೆ., ಮಹೇಶ್ ಕರ್ಕಳ್ಳಿ, ಪ್ರದೀಪ್ ಬಾಚನಳ್ಕರ್, ದತ್ತು ಕರ್ಕಳ್ಳಿ, ಶಿವಶಂಕರ ದೊಡ್ಡಮನಿ, ಶರಣ ಅಮೃತ ಕೋರಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಗರದ ಜಗತ್ ವೃತ್ತ, ಹೀರಾಪುರ ಕ್ರಾಸ್ ವೃತ್ತ, ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಡಾ.ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಆವರಣದಲ್ಲಿ ವಿದ್ಯುತ್ ದೀಪ ಹಾಗೂ ಪುಷ್ಪಾಲಂಕಾರದಿಂದ ಆಕರ್ಷಿಸಿದವು.







