ಚಿಂಚೋಳಿ | ಶಾಸಕ ಯತ್ನಾಳ್‌ರನ್ನು ಬಂಧಿಸಿ, ವಕ್ಫ್ ತಿದ್ದುಪಡಿ ಕಾಯ್ದೆ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇಡೀ ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದೆ, ಯತ್ನಾಳ್ ಹೇಳಿಕೆಗಳ ಮೂಲಕ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದ್ದಾರೆ, ಅವರಿನ್ನು ತಕ್ಷಣವೇ ರಾಜ್ಯ ಸರ್ಕಾರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆ ಜಾರಿಗೊಳಿಸಿದ್ದನ್ನು ಹಿಂಪಡೆಯಬೇಕು ಎಂದು ಚಿಂಚೋಳಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಬ್ದುಲ್ ಬಾಷೀದ್ ಆಗ್ರಹಿಸಿದರು.
ಚಿಂಚೋಳಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ವಿವಿಧ ಸಂಘಟನೆಗಳಿಂದ ಪ್ರವಾದಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಾಡಿ ಜಾರಿ ಮಾಡಿರುವುದು ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದರು.
ಬಡಿದರ್ಗಾ ಸಜ್ಜಾದೆ ನಶೀನ್ ಸೈಯದ್ ಅಕ್ಬರ್ ಹುಸೈನಿ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು, ಕೇಂದ್ರ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತ ಅಸಂವಿಧಾನಿಕ ಮತ್ತು ತಾರತಮ್ಯವನ್ನು ಮಾಡಬಾರದು. ಮುಸ್ಲಿಮರ ಇಚ್ಚೆ, ಆಶಯಕ್ಕೆ ವಿರುದ್ಧವಾಗಿ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ದುರುದ್ದೇಶದಿಂದ ಸಂಸತ್ತಿನಲ್ಲಿ ಅಂಗಿಕರಿಸಿದ 14,15, 25, 26 ಮತ್ತು 29ನೇ ವಿಧಿಯಲ್ಲಿ ಮೂಲಭೂತ ಹಕ್ಕುಗಳ ಖಾತರಿಗೆ ಈ ಮಸೂದೆ ವಿರುದ್ದವಾಗಿದೆ. ಈ ಮಸೂದೆ ಮಧ್ಯಸ್ಥಗಾರರಿಗೆ ಕೇಳಿಸದಂತೆ ಅಂಗಿಕರಿಸ್ವಟ್ಟಿದೆ, ನ್ಯಾಯ ಮತ್ತು ಕಾನೂನಿನ ತತ್ವಕ್ಕೆ ವಿರುದ್ಧವಾಗಿ ಅಂಗೀಕರಿಸಲಾಗಿದ್ದು, ತಕ್ಷಣವೇ ರಾಷ್ಟ್ರಪತಿಗಳು ನೂತನ ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೈಯದ್ ಫಾಸಿಯುಲ್ಲಾ ಹುಸೈನಿ ಸಾಹೇಬ್, ಇಬ್ರಾಹಿಂ ಸಾಬ್, ಪುರಸಭೆ ಸದಸ್ಯ ಅನ್ವರ್ ಖತೀಬ್, ಎಂಡಿ ಮುಸ್ತಫಾ, ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಗಣಪತರಾವ, ಎಸ್ಕೆ ಮೋಖ್ತಾರ್, ಮಹ್ಮುದ್ ಹಾಧಿಸಾಬ, ಶಬ್ಬೀರ ಅಹೇಮದ್, ಸಿರಾಜ್ ಪಟೇಲ್, ಖಲೀಲ್ ಪಟೇಲ, ಅಬ್ದುಲ್ ಮಾಜೀದ್, ಮಹ್ಮುದ್ ಸಾಗೀರ್, ಹಾಫೀಜ್ ಅಬ್ದುಲ್ ಹಮೀದ್, ಅಹೇಮದ್ ಬಾಗಬಾನ್, ಮತೀನ್ ಸೌದಾಗಾರ, ಶೇಕ್ ಫರೀದ್, ರಹೇಮಾನ್, ಸಲಿಂ ಸೌದಾಗಾರ, ಅಲಾವೋದ್ದೀನ್ ಅನ್ಸಾರಿ, ಮಖ್ದೂಮ ಖಾನ್,ಅಸ್ಲಾಂ ಸೌದಾಗಾರ,ಹಸೇನ್ ಹಾಶ್ಮಿ,ಎಂಡಿ ಅಜರ್ ಅಲಿ, ಇರ್ಫಾನ್, ಮೋಯೀನ್ ಮೋಮಿನ್, ಚಾಂದಪಾಷ, ಮುಜ್ಜಾಮೀಲ್, ಅಹೇಮದ್ ಪಟೆಲ, ರಾಜ್ ಮಹ್ಮುದ್, ಎಂಡಿ ಖಾಲಿದ್ ಹುಸೈನ್, ಮೈನೋದ್ದೀನ್, ನಜೀರ್ ಅಹೇಮದ್, ಎಂಡಿ ಶಾರೂಖ್, ಎಂಡಿ ಅಮಜದ್, ತೈಯಾಬ್, ಎಂಡಿ ಖಾಸಿಂ ಸೇರಿದಂತೆ ನೂರಾರು ಜನರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.