ಚಿಂಚೋಳಿ | ಜೆಡಿಎಸ್ ಪಕ್ಷಕ್ಕೆ ಸಂಜೀವನ ಯಾಕಾಪೂರ್ ರಾಜೀನಾಮೆ

ಚಿಂಚೋಳಿ: ನನ್ನ ವೈಯಕ್ತಿಕ ಕಾರಣಗಳಿಂದ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಚಿಂಚೋಳಿ ಮತಕ್ಷೇತ್ರದ ಹಿರಿಯ ಮುಖಂಡ ಸಂಜೀವನ ರಮೇಶ ಯಾಕಾಪೂರ ಹೇಳಿದ್ದಾರೆ.
ಚಂದಾಪೂರ ಪಟ್ಟಣದ ಟಿಎಪಿಎಂಎಸ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಾನು ಜೆಡಿಎಸ್ ನಲ್ಲಿದ್ದಾಗ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಹಲವು ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ, ಜನ ಪರಧ್ವನಿ ಎತ್ತಿದ್ದೇನೆ. ಕಳೆದ ಎರಡ್ಮೂರು ವರ್ಷಗಳಿಂದ ಚಿಂಚೋಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇನೆ, ಈಗ ನನ್ನಿಂದ ಸಾದ್ಯವಾಗದ ಕಾರಣದಿಂದ ಪಕ್ಷಕ್ಕೆ ನನ್ನಿಂದ ಯಾವುದೆ ಮುಜಗರ ಅಡ್ಡಿ ಆಗಬಾರದೆಂದು ಮನಗಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ. ಈಗಾಗಲೇ ನನ್ನ ರಾಜಿನಾಮೆ ಪತ್ರವನ್ನು ಕರ್ನಾಟಕ ಪ್ರದೇಶ ಜನತಾ ದಳ ರಾಜ್ಯ ಅಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ರವಾನಿಸಲಾಗಿದೆ ಎಂದರು.
ಕಳೆದ 2023 ವಿಧಾನ ಸಭೆ ಚುನಾವಣೆಯಲ್ಲಿ ಚಿಂಚೋಳಿ ಮಿಸಲು ಕ್ಷೇತ್ರದಿಂದ ಜೆ.ಡಿ.ಎಸ್ ಪಕ್ಷದಿಂದ ಟಿಕೇಟ್ ನೀಡಿ ಅವಕಾಶ ಮಾಡಿಕೊಟ್ಟ ಜೆ.ಡಿ.ಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೆಗೌಡರಿಗೆ ಹಾಗೂ ರಾಜ್ಯ ಅಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ರವರಿಗೆ ಹಾಗೂ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರಿಗೆ ಹಾಗೂ ತಾಲೂಕಿನ ಎಲ್ಲಾ ಮುಖಂಡರು ಕಾರ್ಯಕರ್ತರಿಗೆ ನಾನು ನನ್ನ ಧನ್ಯವಾದಗಳನ್ನು ಹೇಳುತ್ತೇನೆ, ಮುಂದಿನ ನಿರ್ಣಯವನ್ನು ನನ್ನ ಬೆಂಬಲಿಗರು ನನ್ನ ಹಿತೈಷಿಗಳನ್ನು ಹಾಗೂ ಮುಖಂಡರ ಸಭೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ವಿಷ್ಟಣುಕಾಂತ ಮೂಲಗೆ, ಗೌರಿಶಂಕರ ಸೂರವಾರ, ರಾಹುಲ ಯಾಕಾಪೂರ, ರಘವೀರ ದೇಸಾಯಿ, ಮಲ್ಲಿಕಾರ್ಜುರ್ನ ದೇಸಾಯಿ, ಮಲ್ಲಿಕಾರ್ಜುನ ಪೂಜಾರಿ, ಹಣಮಂತ ಕಟ್ಟಿ, ರೇವಣಸಿದ್ದಪ್ಪ ಬುಬುಲಿ, ಯಶವಂತ, ಚಂದ್ರಕಾಂತ ಧರಿ, ನಾಗೇಂದ್ರಪ್ಪ, ಬಸವರಾಜ, ಸೈಯದ್, ನಿಯಾಜ್ ಅಲಿ, ವೀರಾರೆಡ್ಡಿ, ಅಹ್ಮದ್ ಸೇರಿದಂತೆ ಇತರ ಮುಖಂಡರು ಸಾಮೂಹಿಕ ರಾಜಿನಾಮೆ ನೀಡಿದರು.







