ಚಿಂಚೋಳಿ | ಸಂವಿಧಾನವೇ ಭಾರತದ ಆತ್ಮ: ಜ್ಞಾನಪ್ರಕಾಶ್ ಸ್ವಾಮೀಜಿ ಅಭಿಮತ

ಚಿಂಚೋಳಿ: ಸಂವಿಧಾನವೇ ಭಾರತ ದೇಶದ ಆತ್ಮವಾಗಿದೆ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಉರಿಲಿಂಗ ಪೆದ್ದಿಮಠ, ಮೈಸೂರು ಪೀಠಾಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುಲೇಪೇಟ ಪಟ್ಟಣದಲ್ಲಿ ಶೋಷಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಶುಕ್ರವಾರ ಸರಕಾರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿದ ಮಾತನಾಡಿದರು.
ಸಂವಿಧಾನವನ್ನು ಮುಗಿಸುವ ಅಥವಾ ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಸಂವಿಧಾನವನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದಲೇ ಸುಲೇಪೇಟ ಗ್ರಾಮದಲ್ಲಿ ಎಲ್ಲಾ ಮಹಾಪುರುಷರ ಭಾವಚಿತ್ರಗಳು ಹಾಗೂ ಸಂವಿಧಾನದ ಪೀಠಿಕೆಯೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತ ವಿಕಸಿತ ರಾಷ್ಟ್ರವಾಗಬೇಕಾದರೆ ಸಂವಿಧಾನವೇ ದೇಶದ ಆತ್ಮವಾಗಬೇಕು. ಸಂವಿಧಾನವನ್ನು ಒಂದು ಧರ್ಮ ಅಥವಾ ಒಂದು ಜಾತಿಗೆ ಮಾತ್ರ ಸೀಮಿತವಾಗಿ ಬರೆಯಲಾಗಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಜಾತಿ, ಧರ್ಮ ಹಾಗೂ ವರ್ಗಗಳ ಹಿತಕ್ಕಾಗಿ ಸಂವಿಧಾನ ರಚಿಸಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಂಚಿತವಾಗಿ ಸುಲೇಪೇಟ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಬಸವೇಶ್ವರ ವೃತ್ತದಿಂದ ತೆರವಾದ ವಾಹನದಲ್ಲಿ ಮುಖ್ಯ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ದೇಶಭಕ್ತರು, ಸಮಾಜಸೇವಕರು, ಶರಣರು ಹಾಗೂ ವೀರಯೋಧರ ಭಾವಚಿತ್ರಗಳನ್ನು ಆಟೋಗಳ ಮೇಲೆ ಅಳವಡಿಸಿ ನಡೆಸಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ವಿಠಲ ಮಹಾರಾಜ ಕೊರವಿ, ಬಾಲರಾಜ ಗುತ್ತೇದಾರ್, ಟಿಪ್ಪು ಸುಲ್ತಾನ ವಂಶಜರಾದ ಸಾಹೆಬ್ ಮಂಸೂರ್ ಅಲಿ, ಗ್ರಾ.ಪಂ. ಅಧ್ಯಕ್ಷರಾದ ಸಂತೋಷ ರಾಠೋಡ, ಪ್ರೊ.ಸುಭಾಷ ಶಿಲವಂತ, ಶಿವರಾಮ ರಾಠೋಡ್, ರುದ್ರಶೆಟ್ಟಿ ಪಡಶೆಟ್ಟಿ, ದೇವಿಂದ್ರಪ್ಪ ಹೋಳ್ಕರ್, ಅಶೋಕ್ ಹೂವಿನಭಾವಿ, ನರಸಮ್ಮ ಅವಂಟಿ, ಜ್ಯೋತಿ ಡಿ. ಬೊಮ್ಮ, ಶರಣಬಸಪ್ಪ, ಮಾರುತಿ ಗಂಜಗಿರಿ, ಮಲ್ಲಿಕಾರ್ಜುನ ಪಾಳದಿ, ಮಲ್ಲಿಕಾರ್ಜುನ ಮಾಳಗಿ, ಗುರುನಾಥ ರೆಡ್ಡಿ, ವಿರಣ್ಣ ಗಂಗಣ್ಣ, ಬಾಬಾಣ್ಣ ಗುಲಗುಂಜಿ, ಸಂಪತ್ ಕುಮಾರ ಬೆಳ್ಳಿಚುಕ್ಕಿ, ಸಂದಾನಿ ಕೋಹಿರ್, ಪ್ರಕಾಶ ಮಂತ್ರಿ, ಮಲ್ಲಿಕಾರ್ಜುನ ಜಮ್ಮುನ್, ಮೋಯಿನ್ ಮೊಮಿನ್, ರಜಾಕ್ ಪಟೇಲ್, ತೌಫೀಕ್ ಯಾಕಾಪೂರ, ರವಿ ರುಸ್ತಂಪೂರ, ಸುನಿಲ್ ಕಪೂರ್, ಮಲ್ಲಿಕಾರ್ಜುನ್ ಗುಲಗುಂಜಿ, ಸೀರಾಜ್ ಪಟೇಲ್, ಮೈಹಿಬೂಬ ಮೋಮಿನ್, ಲಾಡ್ಲೆಸಾಬ, ರಸೂಲ್ ಸೇರಿದಂತೆ ಅನೇಕರು ಇದ್ದರು.







