ಚಿಂಚೋಳಿ | ಸಂಭ್ರಮದಿಂದ ಜರುಗಿದ ಬ್ರೆಹಿಲೂಲ್ ಶಾಹ ದರ್ಗಾ ಉರೂಸ್

ಕಲಬುರಗಿ : ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಶಾಹ ದರ್ಗಾದ ಉರೂಸ್ ಪ್ರಯುಕ್ತ ಗಂಧದ ಮೆರವಣಿಗೆಯು ಸಡಗರ ಸಂಭ್ರಮದಿಂದ ಜರುಗಿತು.
ಉರೂಸ್ ಪ್ರಯುಕ್ತ ದರ್ಗಾವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಾತ್ರಿ 9 ಗಂಟೆಗೆ ಜಹಿರೋದ್ದಿನ್ ಪಟೇಲ್ ಮನೆಯಿಂದ ಗಂಧದ ಮೆರವಣಿಗೆ ನಡೆಯಿತು. ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಮೀಲಾದ್ ಹಾಡುವ ತಂಡ, ಹಲಗಿ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು.
ನಂತರ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾಮೀಯ ಮಜೀದ್ ಮೌಲಾನಾ ಹುಸ್ಸೇನ್ ಹಷ್ಮಿ ಜಹಿರೋದ್ದಿನ ಪಟೇಲ್, ಚಾಂದಪಾಷಾ ಮೋಮಿನ್, ಆರೀಫ್ ಪಟೇಲ್, ಝಾಕೀರ್ ಪಟೇಲ್, ಮನ್ನಾನ ಮೋಮಿನ, ರಝಾಕ್ ಪಟೇಲ್, ಸಮದಾನಿ ಹಾಶ್ಮಿ, ಅಹ್ಮದ್ ಮೋಮಿನ್, ಸೈಯದ್ ಉಸ್ಮಾನ್ ಮುಹಮ್ಮದ್ ಫಾಝೀಲ್ ಕೋಹಿರ್, ತಾಹೇರ್ ಮೋಮಿನ್, ರಹೀಮ್ ಸಾಬ್, ತಯ್ಯಬ್ ಮೋಮಿನ್, ರೋಷನ್ ಆಲಿ ಮೋಮಿನ್, ಅಹ್ಮದ್ ಖಾನ್, ಹಾಜಿ ಬಾಬಾ, ತಯ್ಯಾಬ್ ಖುರೇಷಿ, ಮುಸ್ತಾಫಾ ಮೋಮಿನ್, ತೌಸೀಫ್ ಖುರೇಷಿ, ಫಾಯ್ಯಾಜ್ ಸರದಾರ್ ಸೇರಿದಂತೆ ಇತರರು ಇದ್ದರು.