Chitapur | ದಲಿತ ಸೇನೆ ಯುವ ಘಟಕದ ಪದಾಧಿಕಾರಿಗಳ ನೇಮಕ

ಚಿತ್ತಾಪುರ: ದಲಿತ ಸೇನೆ ಸಂಘಟನೆಯ ಉದ್ದೇಶ, ಆಶಯ ಹಾಗೂ ತತ್ವಗಳಿಗೆ ಅನುಗುಣವಾಗಿ ತಾಲೂಕಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರ ಆದೇಶದ ಮೇರೆಗೆ ತಾಲೂಕು ಸಮಿತಿಯ ಯುವ ಘಟಕವನ್ನು ರಚಿಸಲಾಗಿದೆ ಎಂದು ಯುವ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘಟನೆಯ ಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಶೋಷಿತ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಉಪಾಧ್ಯಕ್ಷರಾಗಿ ಬಾಬಾ ಮಕಾನದಾರ, ಫಿರೋಜ್ ಗದ್ವಾಲ್, ಸೈಯದ್ ಮಶಾಕ್, ನಾಗಪ್ಪ ಮುತ್ತಗಿ ಹಾಗೂ ಶೇಖ್ ಇರ್ಫಾನ್ ಗುಲಫರೋಶ್ ನೇಮಕಗೊಂಡಿದ್ದಾರೆ. ಸಂಘಟನಾ ಕಾರ್ಯದರ್ಶಿಗಳಾಗಿ ಸೈಯದ್ ಸದ್ಧಾಂ, ಮಲ್ಲಿಕಾರ್ಜುನ ಕರದಾಳ, ಸೈಯದ್ ರಫೀಕ್ ಹಾಗೂ ಅಂಬರೀಷ್ ತೆಲಗೂರ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಬೊಮ್ಮನೂರ ಮತ್ತು ಖಜಾಂಚಿಯಾಗಿ ಎಂ.ಡಿ. ಜಾಕೀರ ಹುಸೇನ್ ಅವರನ್ನು ನೇಮಕ ಮಾಡಲಾಗಿದೆ.
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.






