Chitapur | ನಾರಾಯಣಸ್ವಾಮಿ ನಿವಾಸಕ್ಕೆ ಚಾಕು, ಚೂರಿ ಕಳುಹಿಸಿದ ಕಾಂಗ್ರೆಸ್ನ ದ್ವೇಷದ ರಾಜಕಾರಣ ಖಂಡನೀಯ : ದೀಪಕ್ ಹೊಸ್ಸೂರಕರ್

ಚಿತ್ತಾಪುರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುವ ನೆಪದಲ್ಲಿ, ಬ್ಲಿಂಕಿಟ್ (Blinkit) ಆ್ಯಪ್ ಮೂಲಕ ‘ಕ್ಯಾಶ್ ಆನ್ ಡೆಲಿವರಿ’ ರೂಪದಲ್ಲಿ 20ಕ್ಕೂ ಹೆಚ್ಚು ಚಾಕು ಹಾಗೂ ಚೂರಿಗಳನ್ನು ಪಾರ್ಸಲ್ ಮಾಡಿ ಕಳುಹಿಸುವ ಮೂಲಕ ಕಾಂಗ್ರೆಸ್ ಮತ್ತು ಎನ್ಎಸ್ಯುಐ (NSUI) ಕಾರ್ಯಕರ್ತರು ಕೀಳುಮಟ್ಟದ ದ್ವೇಷದ ರಾಜಕಾರಣ ಪ್ರದರ್ಶಿಸಿದ್ದಾರೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಡಿ. ಹೊಸ್ಸುರಕರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ಹೇಡಿತನದ ಕೃತ್ಯ ಹಾಗೂ ಬೆದರಿಕೆಗಳಿಗೆ ಚಲವಾದಿ ನಾರಾಯಣಸ್ವಾಮಿ ಅವರು ಕಿಂಚಿತ್ತೂ ಹೆದರುವುದಿಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗೆ ಧೈರ್ಯದಿಂದ ಬದುಕಲು ಹಾಗೂ ಸತ್ಯವನ್ನು ಮಾತನಾಡಲು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
Next Story




