Chitapur | ನಾಳೆಯಿಂದ ಮುಂಗಾರು ಹಂಗಾಮು ಆಂದೋಲನ

ಚಿತ್ತಾಪುರ : ತಾಲೂಕಿನಾದ್ಯಂತ 2026-27ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆ ವತಿಯಿಂದ ಮೇ 16 ರಿಂದ ಜೂ.3 ರವರೆಗೆ ಗ್ರಾಮ ಪಂಚಾಯತಿವಾರು ಮುಂಗಾರು ಹಂಗಾಮು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮುಂಗಾರು ಹಂಗಾಮಿನಲ್ಲಿ ರೈತರು ಅನುಸರಿಸಬೇಕಾದ ವೈಜ್ಞಾನಿಕ ಕೃಷಿ ಪದ್ದತಿಗಳ ಬಗ್ಗೆ ಮಾಹಿತಿ ನೀಡುವುದು ಆಂದೋಲನದ ಮುಖ್ಯ ಉದ್ದೇಶ. ಮಣ್ಣು ಪರೀಕ್ಷೆ, ಬೀಜೋಪಚಾರ, ಸಮತೋಲನ ರಸಗೊಬ್ಬರ ಬಳಕೆ, ತೊಗರಿ ನಾಟಿ ಹಾಗೂ ಗೊಡ್ಡು ರೋಗ ನಿರ್ವಹಣೆ, ತಿಪ್ಪೆ ಗೊಬ್ಬರ ಉಪಚಾರ, ಬಸವನ ಹುಳು ನಿಯಂತ್ರಣ, ಕಸೂಟ ಕಳೆ ಹತೋಟಿ, ಕಬ್ಬು ನಿರ್ವಹಣೆ ಹಾಗೂ ಬರ ನಿರೋಧಕ ಕ್ರಮಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
Next Story




