ಚಿತ್ತಾಪುರ| ಭೂಮಾಪನ ಇಲಾಖೆಯಿಂದ ರೈತರಿಗೆ ಅನ್ಯಾಯ: ರೈತ ಸಂಘ ಆರೋಪ

ಚಿತ್ತಾಪುರ; ಪ್ರಜಾ ಸೌಧದಲ್ಲಿರುವ ಭೂಮಾಪನ ಇಲಾಖೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೂಡಿಹಳ್ಳಿ ಚಂದ್ರಶೇಖರ ಬಣ) ತಾಲೂಕು ಉಪಾಧ್ಯಕ್ಷ ಅರ್ಜುನ್ ಸಾಲಹಳ್ಳಿ ಆರೋಪಿಸಿದ್ದಾರೆ.
ಸುಮಾರು ಎರಡು ತಿಂಗಳ ಹಿಂದೆ ಭೂಮಿಯನ್ನು ಸರ್ವೆ ಮಾಡಲು ರೈತರು ಹಣ ಕಟ್ಟಿದ್ದಾರೆ ಆದರೆ ಯಾವುದೇ ರೀತಿಯ ಸರ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳೇ ಇಲ್ಲ. ಇದರಿಂದ ರೈತರು ಪರದಾಡುವಂತಾಗಿದೆ. ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರು ಪೋಡಿ ಮಾಡಿಕೊಂಡು ಖರೀದಿ ಮಾಡಿಕೊಂಡು ಮುಂದಿನ ತಮ್ಮ ಕಾರ್ಯವನ್ನು ಸುಗಮವಾಗಿ ಸಾಗಬೇಕೆಂದರೆ ಸರ್ವೇನೇ ಆಗಿಲ್ಲ, ಇನ್ನೇನು ಮಳೆಗಾಲ ಚಾಲು ಆಯ್ತು ಭೂಮಿ ಹದ ಮಾಡುವುದು ಯಾವಾಗ ? ಬಿತ್ತನೆ ಮಾಡುವುದು ಯಾವಾಗ ? ಇದರ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೂಡಲೇ ರೈತರ ಸಮಸ್ಯೆಯನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.




