ಚಿತ್ತಾಪುರ | ಬಸವ ಜಯಂತಿ ನಿಮಿತ್ತ ಎ.4 ರಂದು ಪೂರ್ವಭಾವಿ ಸಭೆ

ಚಿತ್ತಾಪುರ : ಬಸವ ಜಯಂತಿ ನಿಮಿತ್ತ ಎ.4ರಂದು ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10ಕ್ಕೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಜಯಂತಿಯ ಆಚರಣೆಯ ಹಾಗೂ ವಿವಿಧ ಸಮಿತಿಗಳ ರಚನೆ ಸೇರಿ ಅನೇಕ ವಿಷಯಗಳನ್ನು ಚರ್ಚೆ ನಡೆಯಲಿದ್ದು. ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮದ ಮುಖಂಡರು ಸಮಾಜದ ಹಿತೈಷಿಗಳು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Next Story





