ಚಿತ್ತಾಪುರ | ತಾಲೂಕು ಪಂಚಾಯತಿ ಮೀಸಲಾತಿ ಪ್ರಕಟ: 14 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳು ಮಹಿಳೆಯರಿಗೆ ಮೀಸಲು

ಚಿತ್ತಾಪುರ; ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಒಟ್ಟು 14 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳು ಮಹಿಳೆಯರಿಗೆ ಮೀಸಲು ಕಲ್ಪಿಸಲಾಗಿದೆ.
ಮೀಸಲಾತಿ ವಿವರ:
ಪ.ಜಾ: 4 (ಮಹಿಳೆಯರಿಗೆ 3), ಪ.ಪಂ: (ಮಹಿಳೆಯರಿಗೆ 1), ಹಿಂದುಳಿದ ವರ್ಗ 'A' : 2 (ಮಹಿಳೆಯರಿಗೆ 1), ಸಾಮಾನ್ಯ : 7 (ಮಹಿಳೆಯರಿಗೆ 3).1-ಗುಂಡಗುರ್ತಿ ಸಾಮಾನ್ಯ, 2-ದಂಡೋತಿ ಸಾಮಾನ್ಯ (ಮಹಿಳೆ), 3-ದಿಗ್ಗಾಂವ ಸಾಮಾನ್ಯ (ಮಹಿಳೆ), 4-ಭಾಗೋಡಿ ಸಾಮಾನ್ಯ, 5-ಕರದಾಳ ಸಾಮಾನ್ಯ, 6-ಹಲಕಟ್ಟಾ ಅನುಸೂಚಿತ ಜಾತಿ, 7-ಲಾಡ್ಲಾಪೂರ ಅನುಸೂಚಿತ ಪಂಗಡ (ಮಹಿಳೆ), 8-ಇಂಗಳಗಿ ಸಾಮಾನ್ಯ, 9-ಅಳ್ಳೋಳ್ಳಿ ಹಿಂದುಳಿದ ವರ್ಗ "A" (ಮಹಿಳೆ), 10-ರಾಜೋಳಾ ಹಿಂದುಳಿದ ವರ್ಗ "A", 11-ಯಾಗಾಪೂರ ಅನುಸೂಚಿತ ಜಾತಿ (ಮಹಿಳೆ), 12-ನಾಲವಾರ ಅನುಸೂಚಿತ ಜಾತಿ (ಮಹಿಳೆ), 13-ಕಡಬೂರ ಸಾಮಾನ್ಯ (ಮಹಿಳೆ), 14-ಕೊಲ್ಲೂರ ಅನುಸೂಚಿತ ಜಾತಿ.
ಆಕ್ಷೇಪಣೆ ಸಲ್ಲಿಸಲು ಅ.19 ಕೊನೆ ದಿನ:
ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 10 ದಿವಸಗಳ ಒಳಗಾಗಿ ಅಂದರೆ ಅ.19 ಸೋಮವಾರ ಸಂಜೆ 5 ಗಂಟೆಯ ಒಳಗೆ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ/ಅಂಚೆಯ ಮೂಲಕ ಸರ್ಕಾರದ ಕಾರ್ಯದರ್ಶಿ(ಪಂ.ರಾಜ್ ಇಲಾಖೆ) ಅವರಿಗೆ ತಲುಪುವಂತೆ ಸಲ್ಲಿಸಬೇಕಿದೆ.
ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಮೂಲಕ ಆಕ್ಷೇಪಣೆಗಳು ಈ ಕಚೇರಿಗೆ ಸ್ವೀಕೃತವಾಗಲು ಆಗುವ ವಿಳಂಬಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ನಿರ್ದೇಶಕರು(ಪಂ.ರಾಜ್) ಮತ್ತು ಪದನಿಮಿತ್ತ ಸರಕಾರದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಹೆಚ್ ತಿಳಿಸಿದ್ದಾರೆ.






