ಚಿತ್ತಾಪುರ: ಹಳ್ಳಕ್ಕೆ ಉರುಳಿದ ದ್ವಿಚಕ್ರ ವಾಹನ; ಸವಾರ ಮೃತ್ಯು

ಕಲಬುರಗಿ : ಹಳ್ಳದ ಮೇಲಿಂದ ದ್ವಿಚಕ್ರ ವಾಹನದೊಂದಿಗೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ಜರುಗಿದೆ.
ವಿಶ್ವರಾಧ್ಯ ಸಾಬಣ್ಣ ಸಂಗಾವಿ (35) ಮೃತ ವ್ಯಕ್ತಿ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಇವಣಿ ಕಡೆಯಿಂದ ಸ್ವಂತ ಗ್ರಾಮ ಬೆಳಗುಂಪಾಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಗೌತಮ್, ಸಿಬ್ಬಂದಿಗಳಾದ ವೀರಶೆಟ್ಟಿ, ಸಂತೋಷ, ಬಸವಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Next Story




