ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನಾಚರಣೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದ ಸಿಬ್ಬಂದಿಗಳು ಬುಧವಾರ ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಸಸಿ ನೆಡುವುದರ ಮೂಲಕ ಸಂವಿಧಾನ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಡಾ.ಅನಿತಾ ಆರ್ ಕಾರಾಗೃಹದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕರಾದ ಎಂ.ಹೆಚ್. ಆಶೇಖಾನ್, ಸಹಾಯಕ ಅಧೀಕ್ಷಕ ಬಿ. ಸುರೇಶ್, ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ ಡಾಂಗೆ, ಜೈಲರ್‌ಗಳಾದ ಸುನಂದ ವಿ, ಪುಂಡಲಿಕ ಟಿ.ಕೆ, ಶ್ಯಾಮ ಬಿದ್ರಿ, ಶಿಕ್ಷಕರಾದ ನಾಗರಾಜ ಮುಲಗೆ ಹಾಗೂ ಕಾರಾಗೃಹದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Next Story





