ಸಂವಿಧಾನ ಎಲ್ಲಾ ಧರ್ಮ ಗ್ರಂಥಗಳಿಗಿಂತ ದೊಡ್ಡದು : ಭಾಲ್ಕಿ ಶ್ರೀ ಬಸವಲಿಂಗ ಪಟ್ಟದೇವರು
ಬಹುತ್ವ ಸಂಸ್ಕೃತಿ ಭಾರತೋತ್ಸವ - 2025 ಯಶಸ್ವಿ

ಕಲಬುರಗಿ : ಸಮಾನತೆಯ ತತ್ವಗಾಗಿ ಪ್ರಾಣ ತೆತ್ತಾದರೂ ಶರಣರು ಸಾರಿದ ಸಮಾನತೆ ತತ್ವವನ್ನು ಉಳಿಸಿ ಬೆಳಸಲು ಮುಂದಾಗಬೇಕು. ಎಲ್ಲಾ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಮಿಗಿಲು ಎಂದು ನಾಡೋಜ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದರು.
ರವಿವಾರ ಸೌಹಾರ್ದ ಕರ್ನಾಟಕದ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ 'ಬಹುತ್ವ ಸಂಸ್ಕೃತಿ ಭಾರತೋತ್ಸವ 2025, ಕಲಬುರಗಿ ಚಲೋ' ಬಹಿರಂಗ ಸಮಾವೇಶದಲ್ಲಿ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್, ಈ ಮೂವರು ದೊಡ್ಡ ಮಹಾಪುರುಷರ ವಿಚಾರಧಾರೆಯನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳುವ ಮೂಲಕ ಭಾರತ ದೇಶ ಕಟ್ಟಬೇಕೆಂದು ಎಂದು ಕರೆ ನೀಡಿದರು.
ಅಲ್ಲಿ(ಸೇಡಂನಲ್ಲಿ) ನಡೆಯುತ್ತಿರುವ ವೈದೀಕೋತ್ಸವ, ಇಲ್ಲಿ ನಡೆಯುತ್ತಿರುವುದು ಭಾರತೋತ್ಸವ. ಎಲ್ಲಾ ಧರ್ಮ ಗ್ರಂಥಗಳು ದೈವ ಶೇಷ್ಠ ಎಂದು ಹೇಳುವುದಾದರೆ, ಸಂವಿಧಾನವೊಂದೇ ಮನುಷ್ಯ ಜೀವನ ಶೇಷ್ಠ ಎಂದು ಕಲಿಸಿಕೊಡುತ್ತದೆ. ಬಸವ ಭೂಮಿಗೆ ಅಪಾಯ ಬಂದಿದೆ ಅಂದರೆ ಇಡೀ ದೇಶಕ್ಕೆ ಅಪಾಯ ಬಂದಂತೆ, ಬಸವಕಲ್ಯಾಣದಲ್ಲಿ, ಕಾಯಕ ಜೀವಿಗಳ ಮಕ್ಕಳ ಕೈಗೆ ಕತ್ತಿ, ನಮ್ಮ ಮಕ್ಕಳಿಗೆ ತ್ರಿಶೂಲ, ಲಾಠಿ, ಸ್ವಾಮಿಗಳ ಮೇಲೆ ಮನಬದಂತೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮಕ್ಕಳಿಂದ ನಿಂದನಾತ್ಮಕ ದಾಳಿ ನಡೆಯುತ್ತಿದೆ. ಬಹುತ್ವವನ್ನು ಹಾಳು ಮಾಡಿ ಏಕ ಸಂಸ್ಕೃತಿ ಹೆರಲಾಗುತ್ತಿದೆ ಇದನ್ನ ಖಂಡಿಸಬೇಕೆಂದು ಕೋರಣೇಶ್ವರ ಮಹಾಸ್ವಾಮಿಗಳು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಮಹಾಸ್ವಾಮಿಗಳು, ಇಂದು ಅನೇಕ ಜನ ಹೆಂಡಕ್ಕೆ, ಹಣಕ್ಕೆ ಆಮೀಶಕ್ಕೆ ಒಳಗಾಗಿ ಈ ನೆಲದ ಬಹು ಸಂಸ್ಕೃತಿ ನಾಶ ಮಾಡುವ ಜನರಿಗೆ ಮಾರಿಕೊಂಡಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಒಡೆದು ಏಕ ಸಂಸ್ಕೃತಿ ಹೇರುವ ಮಂಗಗಳಿಂದ ಸಂಪೂರ್ಣ ನಾಶವಾಗಿದೆ. ಇದನ್ನು ತಪ್ಪಿಸಲು ನಾಡಿನ ಚುಕ್ಕಾಣಿ ಹಿಡಿದವರು ಬದಲಾಗಬೇಕು. ಹಾಗಾಗಿ, ನೀವೇ ಸರ್ಕಾರವಾಗಬೇಕು ಇದು ಎಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಸಲಹೆ ನೀಡಿದ ಅವರು, ಪ್ರಕೃತಿ ಉಳಿಯಬೇಕು, ಶೈಕ್ಷಣಿಕ ಕ್ಷೇತ್ರ ಬದಲಾಗುವ ಮೂಲಕ ಮೇಲ್ದರ್ಜೆಗೇರಬೇಕು ಹಾಗೂ ರಾಜಕಾರಣ ಶುದ್ಧೀಕರಣವಾಗಬೇಕು ಎಂದು ಹೇಳಿದರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಿಣಿ ಅವ್ವಾಜೀ ಮಾತನಾಡಿ, ಬಹುತ್ವದಲ್ಲಿ ಏಕತೆ ಅಗತ್ಯವಿದೆ. ಈ ಜಾಗೃತಿ ಮುಂದುವರೆಯಬೇಕು, ಈ ದೇಶ ಎಲ್ಲಾ ಸಂಸ್ಕೃತಿ ಒಳಗೊಂಡಿರುವ ದೇಶ. ಇದು ಸಮಾನತೆ ಸಾರುವ ನಮ್ಮ ದೇಶ. ಪಶು, ಪಕ್ಷಿ, ಪ್ರಾಣಿ, ಮಾನವರಾಗಿ ಬದುಕಿ ಕಲಬುರಗಿ ಸ್ವವರ್ಣ ಯುಗ ಮಾಡಲು ಮುಂದಾಗೋಣ, ಒಗ್ಗಟ್ಟು ಭಾವನೆಯಿಂದ ಬದುಕು ಸಾಗಿಸೋಣ ಎಂದು ಕರೆ ನೀಡಿದರು.
ರಂಗಾಯಣ ಮಾಜಿ ನಿರ್ದೇಶಕ ಪ್ರೊ. ಆರ್.ಕೆ ಹುಡಗಿ ಮಾತನಾಡಿ, ಆರೆಸ್ಸೆಸ್ ಎನ್ನುವುದು ರಾಷ್ಟ್ರೀಯ ಸರ್ವನಾಶ ಸಂಘಟನೆಯಾಗಿದೆ, ಇವರು ನಮ್ಮ ಬಹುತ್ವವನ್ನು ನಾಶಮಾಡಲು ಮುಂದಾಗಿದ್ದಾರೆ. ತಲೆಯ ಮೇಲೆ ವಚನ ಸಾಹಿತ್ಯ, ವಚನದ ಮೇಲೆ ಸಂವಿಧಾನ ಇಟ್ಟುಕೊಂಡು ತಾತ್ವಿಕ ನೆಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಮಾತನಾಡಿ, ನಾವು ಅನುಭವ ಮಂಟಪ ನೋಡಿಲ್ಲ. ಆದರೆ ಇವತ್ತು ಅನುಭವ ಮಂಟಪದ ಅನುಭವ ಆಗುತ್ತಿದೆ. ಇಂತಹ ಅನುಭವ ಮಂಟಪಕ್ಕೆ ಧಕ್ಕೆ ಬರುತ್ತಿದೆ, ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಬಹುತ್ವ ಎಂದರೆ, ಎಲ್ಲಾ ಜಾತಿ, ಧರ್ಮ, ವರ್ಗ ಹಾಗೂ ಲಿಂಗದವರು ಕೂಡಿ ಬಾಳುವುದೇ ಬಹುತ್ವ. ಬಹುತ್ವ ಭಾರತವನ್ನು ಉಳಿಸುವುದೆಂದರೆ, ಮನುವಾದಿಗಳ ಕಾಲಾಳಾಗಿ ದುಡಿಯುತ್ತಿರುವ ನಮ್ಮ ಯುವಜನರನ್ನು ಬಿಡಿಸಿಕೊಳ್ಳಬೇಕು. ಬುದ್ದ, ಬಸವ, ಅಂಬೇಡ್ಕರ್, ಸೂಫಿಗಳು, ಶರಣರು, ಕನಕತತ್ವ ಪದಕಾರರು ಹಾಕಿರುವ ದಾರಿಯನ್ನು ಅನುಸರಿ ನಡೆಯಬೇಕು ಎಂದರು.
ದಗದ ಲಡಾಯಿ ಪ್ರಕಾಶನದ ಬಸೂ ಮಾತನಾಡಿ, ವೈದಿಕ ಪರಂಪರೆಗೆ ವಿರುದ್ಧವಾಗಿ ಹುಟ್ಟಿಕೊಂಡಿರುವ ಬೌದ್ಧ ಧಮ್ಮ, ಶರಣ ಚಳುವಳಿ, ಸೂಫಿ, ಹಾಗೂ ಸಂತ ಪರಂಪರೆ. ಹಾಗಾಗಿ, ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅಥಿತಿಯಾಗಿದ್ದ ಮಠಾಧೀಶರು ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಸ್ಕೃತಿ ಹೆಸರಲ್ಲಿ ಕಾಡ್ಗಿಚ್ಚು ಹಚ್ಚಲಾಗಿದೆ. ಇದಕ್ಕೆ ನೀರು ಎರಚಬೇಕಾಗಿದೆ. ರಾಷ್ಟ್ರೀಯ ಧ್ವಜ, ರಾಷ್ಟ್ರೀಯ ಪಿತಾ, ಶರಣ, ಸೂಫಿಗಳ ಪ್ರೀತಿಯನ್ನು ಬೆಳಸಿಕೊಳ್ಳಬೇಕು. ಹಿಂದುತ್ವದ ಹೆಸರಲ್ಲಿ ಲಿಂಗಾಯತರನ್ನು ಖಡ್ಡಕ್ಕೆ ಖೇಡುವ ಹುನ್ನಾರ ನಡೆಯುತ್ತಿದೆ. ಯುವಕರು ಇವರ ಖೇಡಕ್ಕೆ ಬೆಳುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯ ಮೇಲೆ ಬಸವ ತತ್ವದ ಪ್ರತಿಪಾದಕ ಜೆ.ಎಸ್. ಪಾಟೀಲ, ಸಂಸ್ಕೃತ ಚಿಂತಕರಾದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಬೀದರ್ ನ ಭಂತೆ ವರಜ್ಯೋತಿ, ಮಳಿಖೇಡ್ ದರ್ಗಾದ ಸಜ್ಜಾದೆ ಶಾ ಖಾದ್ರಿ, ಹುಲುಸುರಿನ ಶಿವಾನಂದ ಮಹಾಸ್ವಾಮಿಗಳು, ಚನ್ನಬಸವಾನಂದ ಸ್ವಾಮಿಗಳು, ಬಸವಪ್ರಭು ಸ್ವಾಮಿಗಳು, ಜಾಗತೀಕ ಲಿಂಗಾಯತ ಮಹಾಸಭಾದ ರಾಜ್ಯಾದ್ಯಕ್ಷ ಜಿ.ಬಿ.ಪಾಟೀಲ, ಮಳಖೇಡ ಸೈಯದ್ ಶಹಾ, ವರಲಕ್ಷ್ಮೀ, ಫಾದರ್ ಸ್ಟ್ಯಾನಿ ಲೋಬೊ, ಮನೋಜ ಮಂಗಳೂರ, ಮಾತೆ ಗಂಗಾಂಬಿಕೆ, ಕೆ.ಎಸ್.ವಿಮಲಾ, ಕೆ ನೀಲಾ, ಗುರುಶಾಂತ ಭಾಗವಹಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ಹಜರತ್ ಶೇಖ್, ಅಲ್ಲಮ ಪ್ರಭು ಬೆಟ್ಟದೂರು, ದಸಂಸ ರಾಜ್ಯ ಸಂ.ಸಂಚಾಲಕರಾದ ಮರಿಯಪ್ಪ ಹಳ್ಳಿ ಲಚ್ಚಪ್ಪ ಜಮಾದಾರ, ಅರ್ಜುನ್ ಬದ್ರೆ, ಎಸ್.ಆರ್.ಕೊಲ್ಲೂರ, ಎಂ.ವೈ.ಗೋರ್ಪಡೆ, ಬಿಸಿ ವಾಲಿ, ಆರ್.ಜಿ.ಶೆಟಗಾರ, ಶಾಮ ನಾಟೀಕರ, ಸುರೇಶ ಮೆಂಗನ್, ಪ್ರಕಾಶ ಮೂಲಭರತಿ, ಲವಿತ್ರ ವಸ್ತ್ರದ, ಆರ್.ಕೆ.ಹುಡುಗಿ, ಲಡಾಯಿ ಬಸೂ, ದತ್ತಾತ್ರೇಯ ಇಕ್ಕಳಕಿ, ಶ್ರೈಶೈಲ ಮಸೂತಿ ಸೇರಿದಂತೆ ಇತರರಿದ್ದರು.
ಅಲ್ಲದೆ, ಮುಜಾಹೀದ್ ಪಾಶಾ ಖುರೈಷಿ, ಶಾಮ ನಾಟಿಕಾರ್, ಆರ್ ಜಿ ಶೆಟಗಾರ, ರಿಜ್ವಾನ್ ಸಿದ್ದಿಕಿಸಾಬ,ರವೀಂದ್ರ ಶಾಬಾದಿ, ಎಸ್ ಪಿ ಸುಳ್ಯದ, ಶರೀಫ್ ಬಿಳಿಯಲಿ, ಎ.ಬಿ. ಹೊಸಮನಿ, ಅರ್ಜುನ ಗೊಬ್ಬರ, ಡಾ.ಕಾಶಿನಾಥ ಅಂಬಲಗೆ, ಡಾ.ಪ್ರಭು ಖಾನಾಪೂರೆ, ಪ್ರಭುಲಿಂಗ ಮಹಾಗಾಂವಕರ್, ಮಾರುತಿ ಗೋಖಲೆ, ಮರೆಪ್ಪ ಹಳ್ಳಿ, ಪ್ರೊ ಸಂಜಯ ಮಾಕಲ್, ಸುರೇಶ ಮೇಂಗನ್, ಎಸ್ ಎಸ್ ತವಡೇ, ಮಲ್ಲಪ್ಪ ಹೊಸ್ಮನಿ, ಪ್ರಕಾಶ ಮೂಲಭಾರತಿ, ದೇವೇಂದ್ರ ಸಿನ್ನೂರ, ಗೌತಮ ಕರೆಕಲ್, ನಾಗೇಶ ಕೊಳ್ಳಿ, ಶರಣಬಸವ ಸೂರ್ಯವಂಶಿ, ಲಿಂಗರಾಜ ತಾರಫೈಲ್, ಪದ್ಮಾ ಪಾಟೀಲ, ಸಂದೀಪ ಭರಣಿ, ನಗನೂರ ಜೇವರ್ಗಿ, ಪವನ ವಳಕೇರಿ, ಪ್ರಕಾಶ ನಾಗನಳ್ಳಿ, ಮಹಾದೇವ ಧನ್ನಿ, ಚೆನ್ನಪ್ಪ ಆನೆಗುಂದಿ, ಸತ್ಯಬಾಬು, ಬಳ್ಳಾರಿ, ಸುರೇಖಾ ವಿಜಯಪುರ, ಮಲ್ಲಣ್ಣ ಸತ್ಯಂಪೇಟೆ, ಪದ್ದಿನಿ ಕಿರಣಗಿ, ಮುತ್ತು ಬಿಳಿಯಲಿ ಗದಗ, ವಿಕ್ರಮ ತೇಜಸ್, ನಾಗೇಂದ್ರ ನಿಂಬರ್ಗಿ, ಪಾಂಡುರಂಗ ಮಾವಿನಕರ್, ದಿಗಂಬರ ಬೆಳಮಗಿ, ಪ್ರಕಾಶ ಕಪನೂರ, ಪ್ರಕಾಶ ಚಾಳಿ, ತಿಪ್ಪಣ್ಣ ಒಡೆಯರಾಜ, ಮಹಾಂತೇಶ ಕಲಬುರಗಿ, ಹಣಮಂತ ದೊಡ್ಮನಿ, ಶಾಂತಾ ಘಂಟೆ, ದಯಾನಂದ ದೊಡ್ಮನಿ, ದೇವೇಂದ್ರ ಹೆಗ್ಗಡೆ, ಗುಂಡಪ್ಪ ಲಂಡನಕರ್, ಭೀಮಶಾ ಖನ್ನಾ ಮಂಜು ಸಿ.ಕೆ, ಕೆ ಜಿ ವೀರೇಶ, ಪ್ರಭು ಸಂತೋಳಕರ್, ಮುಜೈದ ಪಾಳಾ ಖುರೈಷಿ, ಬಸವಕಲ್ಯಾಣ, ಆರ್ ರಾಮಚಂದ್ರ, ದಾವಣಗೆರೆ, ಶ್ರೀಮಂತ ಬಿರಾದಾರ, ಸುಧಾಮ ಧನ್ನಿ, ಶರಣಬಸಪ್ಪ ಮಮಶೆಟ್ಟಿ, ಮೌಲಾಮುಲ್ಲಾ, ಭೀಮಶೆಟ್ಟಿ ಯಂಪಳ್ಳಿ, ದತ್ತಾತ್ರಯ ಇಕ್ಕಳಕಿ, ಶ್ರೀಶೈಲ ಘೂಳಿ, ಭೀಮಾಶಂಕರ ಮಾಡ್ಯಾಳ, ಗೌರಮ್ಮ ಪಾಟೀಲ, ಶರಣಗೌಡ ಪಾಟೀಲ, ರಾಜಲಕ್ಷ್ಮಿ ಇಕ್ಕಳಕಿ, ಶಿವಲಿಂಗಮ್ಮ ವಿ ಲೇಂಗಟಿಕರ್, ಧನರಾಜ ತಾಂಬೋಳೆ, ಮೊಹಮ್ಮದ್ ಅಫಜಲ್, ದತ್ತಾತ್ರಯ ಇಕ್ಕಳಕಿ, ಸುಜಾತಾ ಕೆ., ನಾಗೇಶ ಹರಳಯ್ಯ,ಚಂದಮ್ಮ ಗೋಳಾ ಮತ್ತಿತರರು ಪಾಲ್ಗೊಂಡಿದ್ದರು.
ಆರ್.ಕೆ.ಹುಡುಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಸಂಸ ಜಿಲ್ಲಾ ಸುರೇಶ ಹಾದಿಮನಿ ಸ್ವಾಗತಿಸಿದರು. ಡಾ.ಮೀನಾಕ್ಷಿ ಬಾಳಿ ನಿರೂಪಿಸಿದರು. ಮಹೇಶ ರಾಠೋಡ ವಂದಿಸಿದರು.
ವಚನಗಳ ಮೇಲೆ ಸನಾತನಿಗಳ ದಾಳಿ :
ವಚನ ದರ್ಶನಗಳ ಮೂಲಕ ಬಸವಣ್ಣನವರ ವಚನಗಳ ತಿರುಚುವ ಮೂಲಕ ಸನಾತನಿಗಳು ಲಿಂಗಾಯತ ಧರ್ಮದ ಮೇಲೆ ಸೈದ್ದಾಂತಿಕ ದಾಳಿ ನಡೆಸುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಕೋಮುವಾದಿಗಳ ಗಾಳಕ್ಕೆ ಬಿದ್ದು ಇಂದಿನ ನಮ್ಮ ತರುಣರು ವಿಷ ಕಕ್ಕುತ್ತಿದ್ದಾರೆ. ಸಮಾನತೆಯಲ್ಲದ ಸಮಾಜದ ಕಡೆಗೆ ಹೆಜ್ಜೆ ಹಾಕುತ್ತಿರುವುದು ದುರಂತ. ದೇಶ ಮತ್ತು ಸಂಸ್ಕೃತಿ ಹೆಸರಲ್ಲಿ ಮಕ್ಕಳು ನಮ್ಮ ಭಾರತದ ಬಹು ಸಂಸ್ಕೃತಿಯಿಂದ ದೂರು ಉಳಿಯುತ್ತಿದ್ದಾರೆ. ಇದ್ದನು ತಪ್ಪಿಸಿ ಶಾಂತಿ ಮತ್ತು ಸೌಹಾರ್ದತೆ ಭಾರತದ ಕಟ್ಟುವ ಕಡೆಗೆ ಹೆಜ್ಜೆ ಹಾಕುವಂತಹ ವಾತಾವರಣ ನಿರ್ಮಿಸಬೇಕು ಎಂದು ಕೆ.ನೀಲಾ ಕರೆ ನೀಡಿದರು..
ಲಿಂಗಾಯತ ಮಠಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ನಡೆಸುವುದು ನಿಲ್ಲಿಸಬೇಕೆಂದು ವೇದಿಕೆಯಲ್ಲಿ ಆಗ್ರಹಿಸಲಾಯಿತು.
ಇದಕ್ಕೂ ಮುನ್ನ ನಗರದ ಕನ್ನಡ ಭವನದಿಂದ ಜಗತ್ ವೃತ್ತದ ವರೆಗೆ ಕಾಲ್ನಡಿಗೆಯ ಮೂಲಕ ಬೃಹತ್ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಗಳು, ದರ್ಗಾದ ಸಜ್ಜಾದೇಗಳು, ವಿವಿಧ ಧಾರ್ಮಿಕ ಮುಖಂಡರು, ಸಾಮಾಜಿಕ ಚಿಂತಕರು, ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಹಲವಾರು ಬುದ್ಧಿಜೀವಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವುದರ ಮೂಲಕ ಭಾವೈಕ್ಯತೆಯನ್ನು ಸಾರಿದರು.







