ಕಲಬುರಗಿ| ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಬೈಕ್ ನೀಡಿದ ತಂದೆಗೆ 26 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಕಲಬುರಗಿ: ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟ ತಂದೆಯೊಬ್ಬರಿಗೆ ಅಫಜಲಪುರದ ಜೆಎಂಎಫ್ ಸಿ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ತನ್ನ ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಮಗನಿಗೆ ಬೈಕ್ ಓಡಿಸಲು ಅವಕಾಶ ನೀಡಿದ್ದ ಅಫಜಲಪುರ ಪಟ್ಟಣದ ನಿವಾಸಿ ಗುರುಲಿಂಗಪ್ಪ ಮಲ್ಲಪ್ಪ ಜಂಬಗಿ ಎಂಬವರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಅಪ್ರಾಪ್ತನ ಕೈಯಲ್ಲಿದ್ದ ಸ್ಟೆಂಡರ್ ಬೈಕ್ ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ.
199(ಎ) ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಬೈಕ್ ನೀಡಿದ ತಂದೆಗೆ 26 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಇದೇ ವೇಳೆಯಲ್ಲಿ ಅಪ್ರಾಪ್ತ ಮಕ್ಕಗಳಿಗೆ ದ್ವಿಚಕ್ರ ವಾಹನ, ಸೇರಿದಂತೆ ಯಾವುದೇ ವಾಹನಗಳನ್ನು ಚಲಾಯಿಸಲು ಅವಕಾಶ ನೀಡದಂತೆ ಸಲಹೆ ನೀಡಿದೆ.
Next Story





