ರಾಷ್ಟ್ರೀಯ ಭಾವೈಕ್ಯತೆಗಾಗಿ ಸೈಕಲ್ ಜಾಥಾ : ಶಶೀಲ್ ನಮೋಶಿ ಚಾಲನೆ

ಕಲಬುರಗಿ : ಇಂಧನ ಉಳಿತಾಯ ಜಾಗೃತಿ ಮತ್ತು ಹಸಿರು ಹೊನ್ನ ಸಂರಕ್ಷಣೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗಾಗಿ ಹಾಸನದ ಸಿಕೋ ಸಂಸ್ಥೆ ಮತ್ತು ವಿವೇಕ ಜಾಗೃತ ಯೋಗ ವಿದ್ಯಾಪೀಠ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ನಗರದಲ್ಲಿ ಸೈಕಲ್ ಜಾಥಾ ನಡೆಯಿತು.
ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ಅವರು ಸೈಕಲ್ ಜಾಥಾಕೆ ಚಾಲನೆ ನೀಡಿದರು.
ಅಲ್ಲಮಪ್ರಭು ದೇಶಮುಖ, ಪತಂಜಲಿ ಯೋಗ ಸಮಿತಿಯ ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಶಿವಾನಂದ ಸಾಲಿಮಠ, ರೋಟರಿ ಕ್ಲಬ್ ಪ್ರೌಢಶಾಲೆ ಮುಖ್ಯಗುರು ಪಾಂಡುರಂಗ ಕಟಕೆ, ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ.ಚಂದ್ರಕಾಂತ ಬಿ.ಬಿರಾದಾರ, ವಿವೇಕ ಜಾಗೃತಿ ವಿದ್ಯಾಪೀಠದ ಅಧ್ಯಕ್ಷೆ ಮಾಧುರಿ ಸಿ,ಬಿರಾದಾರ, ಕಾರ್ಯಕ್ರಮದ ಸಹ ಸಂಯೋಜಕರಾದ ಸುದೀಪ ಮಾಳಗಿ, ಅರುಣಕುಮಾರ ಮಹಾಶೆಟ್ಟಿ, ಸಿಕೋ ಸಂಸ್ಥೆ ಮುಖ್ಯಸ್ಥ ಡಾ.ಹರೀಶಕುಮಾರ, ಲಿಂಗರಾಜ ಎಸ್.ಎಂ ಸೇರಿದಂತೆ ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.
Next Story







