Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಬರೆಯುವುದು...

ಪ್ರಶಸ್ತಿ, ಪುರಸ್ಕಾರಗಳಿಗಾಗಿ ಬರೆಯುವುದು ವೃತ್ತಿಗೆ ಮಾಡಿದ ಅವಮಾನ ಎಂದು ಲೇಖಕರು ತಿಳಿದುಕೊಳ್ಳಬೇಕು: ದೀಪಾ ಭಾಸ್ತಿ

ವಾರ್ತಾಭಾರತಿವಾರ್ತಾಭಾರತಿ10 Dec 2025 10:15 PM IST
share
ಪ್ರಶಸ್ತಿ, ಪುರಸ್ಕಾರಗಳಿಗಾಗಿ ಬರೆಯುವುದು ವೃತ್ತಿಗೆ ಮಾಡಿದ ಅವಮಾನ ಎಂದು ಲೇಖಕರು ತಿಳಿದುಕೊಳ್ಳಬೇಕು: ದೀಪಾ ಭಾಸ್ತಿ

ಕಲಬುರಗಿ: "ಪ್ರಶಸ್ತಿಗಾಗಿ ಬರೆಯುವವರು ಹೆಚ್ಚಾಗಿದ್ದಾರೆಂಬ ಮಾತು ಕೇಳಿಬರುತ್ತಿದೆ, ಆದರೆ ಪ್ರಶಸ್ತಿ, ಪುರಸ್ಕಾರಗಳಿಗೆ ಬರೆಯುವುದು ವೃತ್ತಿಗೆ ಮಾಡಿದ ಅವಮಾನ ಎಂಬುದುನ್ನು ಲೇಖಕರು ತಿಳಿದುಕೊಳ್ಳಬೇಕು" ಎಂದು ಅನುವಾದ ಸಾಹಿತ್ಯದಲ್ಲಿ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅಭಿಪ್ರಾಯಪಟ್ಟರು.

ಬುಧವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಿಂದ ಆಯೋಜಿಸಿದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ದೀಪಾ ಭಾಸ್ತಿ, ಶರಣ, ದಾಸ, ಸೂಫಿ-ಸಂತರ ನಾಡಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಕಲೆ, ಸಾಹಿತ್ಯದಲ್ಲಿ ಅಪಾರ ಶ್ರೀಮಂತಿಕೆ ಹೊಂದಿದ್ದು, ಇದನ್ನು ಗುರುತಿಸುವ ಕೆಲಸ ಸ್ಥಳೀಯ ಲೇಖಕರು ಅನುವಾದದ ಮೂಲಕವೂ ಮಾಡಬೇಕಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮದ್ರಾಸ್ ಕರ್ನಾಟಕ, ಮೈಸೂರು ಕರ್ನಾಟಕ ಹೀಗೆ ಕನ್ನಡ ಭಾಷೆ ಪ್ರಾಂತ್ಯಕ್ಕನುಗುಣವಾಗಿ ವಿಶಿಷ್ಟ ಸಾಹಿತ್ಯ ಹೊಂದಿದ್ದು, ಇಂತಹ ಪ್ರಾದೇಶಿಕ ಸಾಹಿತ್ಯವನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ದೀಪಾ ಭಾಸ್ತಿ ಹೇಳಿದರು.

ಪ್ರದೇಶದ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಲು ಅನುವಾದ ಅಗತ್ಯವಾಗಿದ್ದು, ಇದನ್ನು ಸ್ಥಳೀಯ ಬರಹಗಾರರೆ ಮಾಡಿದಲ್ಲಿ ಒಳ್ಳೆಯದು. ಸ್ಥಳೀಯ ಸೊಗಡನ್ನು ತಮ್ಮದೇ ದೃಷಿಕೋನದಲ್ಲಿ ಬಿಂಬಿಸುವ ಅನುವಾದ ಮಾಡಿದಾಗ ಮಾತ್ರ ಕಲ್ಯಾಣ ಕರ್ನಾಟಕದ ಕಲೆ, ಸಂಸ್ಕೃತಿ, ಭಾಷೆ, ಭೂಷಣ, ಉಡುಗೆ-ತೊಡುಗೆ ಎಲ್ಲವು ಚಿರಪರಿಚಿತವಾಗಲು ಸಾಧ್ಯ ಎಂದು ಹೇಳಿದರು.

ಈ ಪ್ರದೇಶದ ಕಲೆ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಗುಲ್ಬರ್ಗಾ ವಿವಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಸಂಪ್ರದಾಯವಾಗಿದೆ. ಬಹಮಾನ ಪಡೆದವರೆಲ್ಲ ಬಹುಮಾನ್ಯರಲ್ಲ ಎಂಬ ಕೆ.ಎಸ್.ನಿಸಾರ್‌ ಅಹ್ಮದ್‌ ಅವರ ಮಾತು ನೆನೆಪಿಸಿಕೊಂಡ ಅವರು, ಬದಲಾಗಿ ಸಮಾಜಕ್ಕೆ ಕೊಡುಗೆ ನೀಡಲು ನಿಮ್ಮ ಜವಾಬ್ದಾರಿ ಇಂದಿನಿಂದ ಮತ್ತಷ್ಟು ಹೆಚ್ಚಾಗಿದೆ ಎಂದು ಸಾಧಕರನ್ನುದ್ದೇಶಿಸಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಮರ್ಶಕ, ಸಾಹಿತಿ ಎಸ್.ಆರ್.ವಿಜಯಶಂಕರ ಮಾತನಾಡಿ, ಕರ್ನಾಟಕದ ಪ್ರತಿ ಪ್ರಾಂತ್ಯದಲ್ಲಿ ವಿಭಿನ್ನ ಸಂಸ್ಕೃತಿ, ಭಾಷೆ, ಕಲೆ, ಸಾಹಿತ್ಯ ಕಾಣಬಹುದಾಗಿದೆ. ಎಲ್ಲಾ ಕನ್ನಡ ಒಂದೇ ಎಂದು ಹೇಳಲು ಅಸಾಧ್ಯ. ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲಾ ಭಾಷೆಗಳನ್ನು ಪರಸ್ಪರ ಗೌರವಿಸಬೇಕಿದೆ. ಹಿಂದಿ ಭಾಷೆ ಹೇರಿಕೆ ಒಪ್ಪುವುದಿಲ್ಲ ಎಂದ ಅವರು, ಬಹುತ್ವದ ಭಾರತಕ್ಕೆ ಕನ್ನಡವೇ ಸಾಕ್ಷಿಯಾಗಿದೆ. ಜಗತ್ತಿನ ಎಲ್ಲಾ ಜ್ಞಾನ ಹೀರಿಕೊಳ್ಳುವ ಮತ್ತು ವಿಶ್ವಕ್ಕೆ ಜ್ಞಾನ ನೀಡುವ ಶಕ್ತಿ ಕನ್ನಡಕ್ಕೆ ಮತ್ತು ಕನ್ನಡಿಗರಿಗಿದೆ ಎಂದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಮಾತನಾಡಿ, ಸಿರಿವಂತಿಕೆಯ ತವರೂರಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಕಲೆ, ಸಾಹಿತ್ಯ ಪಸರಿಸಲು ಅನುವಾದ ಅಗತ್ಯವಾಗಿದ್ದು, ಗುಲ್ಬರ್ಗಾ ವಿ.ವಿ. ಅನುವಾದ ವಿಭಾಗ ಆರಂಭಿಸಬೇಕು. ಖಾಯಂ ಪ್ರಾಧ್ಯಾಪಕರಿಲ್ಲದೆ ವಿ.ವಿ. ನರಳುತ್ತಿದ್ದು, ಬೋಧಕ-ಬೋಧಕೇತರ ಹುದ್ದೆಗಳನ್ನು ಸರಕಾರ ತುಂಬುವ ಮೂಲಕ ವಿಶ್ವವಿದ್ಯಾಲಯವನ್ನು ಉಳಿಸಬೇಕು ಮತ್ತು ಕೆಕೆಆರ್ ಡಿಬಿ ಮೂಲಕ ಮೂಲಸೌಕರ್ಯ ಭದ್ರಪಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುಲ್ಬರ್ಗಾ ವಿ.ವಿ. ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಕನ್ನಡ ನಾಡು ನುಡಿಗೆ ಶ್ರಮಿಸಿದ್ದವರನ್ನು ಗುರುತಿಸುತ್ತಾ ಗುಲಬರ್ಗಾ ವಿ.ವಿ. ಪ್ರಸಾರಾಂಗವು ಕಳೆದ 4 ದಶಕಗಳಿಂದಲೂ ಮಹನೀಯರು ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ವರ್ಷದಿಂದ ಸಂಘ-ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ವಿ.ವಿ.ಯ ಪ್ರಸಾರಾಂಗ ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:

ಸೃಜನಶೀಲ ಬರವಣಿಗೆಯಲ್ಲಿ ಡಾ.ರಾಜಶೇಖರ ಹಳೆಮನಿ, ಬಿ.ಜೆ.ಪಾರ್ವತಿ ಸೋನಾರೆ, ಡಾ. ಪರ್ವೀನ್ ಸುಲ್ತಾನಾ, ಧರ್ಮಣ್ಣ ಎಚ್. ಧನ್ನಿ, ರೇವಣಸಿದ್ದಪ್ಪ ದುಕಾನ್, ಸುಧೀರ್ ಎಸ್. ಬಿರಾದಾರ ಹಾಗೂ ಸೃಜನೇತರ ಸಾಹಿತ್ಯದಲ್ಲಿ ಪ್ರಭುಲಿಂಗ ನೀಲೂರೆ, ಶ್ರೀನಿವಾಸ ಸಿರನೂರಕರ್, ಡಾ.ಕರುಣಾ ಜಮದರಖಾನಿ, ಡಾ.ಪ್ರಕಾಶ ಎಚ್. ಸಂಗಮ, ಡಾ.ಗೋವಿಂದ, ವಚನ ಸಾಹಿತ್ಯದಲ್ಲಿ ಡಾ.ಹಣಮಂತ ಬಿ.ಮೇಲಿಕೇರಿ, ಜಾನಪದ ವಿಭಾಗದಲ್ಲಿ ಸಂಗಮೇಶ ಬಾದವಾಡಗಿ, ಸಮಾಜ ವಿಜ್ಞಾನ ವಿಭಾಗದಲ್ಲಿ ಡಾ.ಚಿನ್ನ ಆಶಪ್ಪ, ಇಂಗ್ಲೀಷ್ ಸಾಹಿತ್ಯದಲ್ಲಿ ಡಾ.ಶಿವಾನಂದ ಶಂಕರ್, ಉರ್ದು ಸಾಹಿತ್ಯದಲ್ಲಿ ಡಾ.ಖಮೀರುನ್ನಿಸಾ, ಜಾನಪದ ಕಲೆ ವಿಭಾಗದಲ್ಲಿ ಸೂರ್ಯಕಾಂತ ಬಿ. ಪೂಜಾರಿ ಮತ್ತು ಕಸ್ತೂರಿ, ಶಿಲ್ಪಕಲೆ ವಿಭಾಗದಲ್ಲಿ ರಾಜಶೇಖರ ಬಡಿಗೇರ್ ಅವರಿಗೆ ಫಲಕ, ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಅದೇ ರೀತಿ ರಾಜ್ಯ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಡಾ.ಸಿ.ನಾಗರಾಜ, ವಿಜ್ಞಾನ ಪುಸ್ತಕ ವಿಭಾಗದಲ್ಲಿ ಡಾ.ಹಾ.ಮ.ನಾಗಾರ್ಜುನ ಹಾಗೂ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಪಾತ್ರರಾದ ಡಾ.ಪಿ.ನಂದಕುಮಾರ್‌, ಬೆಳ್ಳಿ ಪದಕಕ್ಕೆ ಭಾಜನರಾದ ಶಶಿಕುಮಾರ್‌ ತರಿಕೇರೆ, ಕಂಚಿನ ಪದಕಕ್ಕೆ ಆಯ್ಕೆಯಾದ ಡಾ.ಶುಲಾಬಾಯಿ ಹಿತವಂತ ಮತ್ತು ರಜನಿಕಾಂತ ವಿ. ಬರೂಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶ್ರೀದೇವಿ ಎಸ್.ಕಟ್ಟಿಮನಿ, ವಿದ್ಯಾ ವಿಷಯಕ್ ಪರಿಷತ್ ಸದಸ್ಯ ಪ್ರೊ. ಸಿ.ಸುಲೋಚನಾ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ. ರಮೇಶ್‌ ಲಂಡನಕರ್ ಸೇರಿದಂತೆ ವಿ.ವಿ.ಯ ಬೋಧಕ, ಬೋಧಕೇತರ ವೃಂದದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ.ಎಚ್.ಟಿ.ಪೋತೆ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X