ಕಲಬುರಗಿ: ಕಿವುಡ, ಮೂಕ ಮಕ್ಕಳ ಶಾಲೆಗೆ ರೇಷನ್ ಸಾಮಗ್ರಿ ವಿತರಣೆ

ಕಲಬುರಗಿ: ನಗರದ ನಾಗನಹಳ್ಳಿ ರಸ್ತೆಯಲ್ಲಿರುವ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ಸಮಾನ ಮನಸ್ಕರುಳ್ಳ ಸ್ನೇಹಿತರೆಲ್ಲರೂ ಸೇರಿ ಕಟ್ಟಿರುವ ಕನಸು ಸೇವಾ ಸಂಸ್ಥೆ(ರಿ) ವತಿಯಿಂದ ರೇಷನ್ ಸಾಮಾಗ್ರಿ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷಕುಮಾರ್ ಎಸ್.ಪಿ, ಉಪಾಧ್ಯಕ್ಷರಾದ ಅವಿನಾಶ ಜಾನಕಾರ, ಕಾರ್ಯದರ್ಶಿ ರಾಚಯ್ಯಸ್ವಾಮಿ ಹಿರೇಮಠ, ಖಜಾಂಚಿ ಭೀಮಾಶಂಕರ ಝಳಕಿ, ಸಂಸ್ಥೆಯ ಪದಾಧಿಕಾರಿಗಳಾದ ಮಲ್ಲಪ್ಪ ಮೊಗಲಾ, ವಿಷ್ಣು ಘಾಳೆ, ಕರ್ಣ ಯಲಬತ್ತಿ, ಅಲ್ಲಮಪ್ರಭು ಕುಂಬಾರ, ಮಲ್ಲಿಕಾರ್ಜುನ ಪಾಟೀಲ್, ತ್ರಿಧರ್ ಸರಡಗಿ, ಸಚಿನ್ ಕೋಚಿ, ಅಭಿಷೇಕ ಗಾಯಕವಾಡ ಮತ್ತು ಶಾಲೆಯ ಮುಖ್ಯಸ್ಥ ರಾಜು ಎಸ್ ಶಖಾಪುರ, ಶಿವಶರಣಪ್ಪ ಶಖಾಪುರ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮಾಳಗೆ, ವಿನಯಕುಮಾರ್, ಮಹಾಂತೇಶ, ಅನೀತಾ ಸಿಬ್ಬಂದಿವರ್ಗ ಮಕ್ಕಳು ಇದ್ದರು.
Next Story





