ಭಾರತದ ಹೆಮ್ಮೆಯ ವಿಜ್ಞಾನಿ ಡಾ.ಅಬ್ದುಲ್ ಕಲಾಂ: ಅಹ್ಮದ್ ಪಟೇಲ್

ಕಲಬುರಗಿ: ಭಾರತದ ಹೆಮ್ಮೆಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನಮ್ಮ ದೇಶ ಮತ್ತು ಪ್ರಪಂಚ ಕಂಡ ಮಹಾನ್ ವಿಜ್ಞಾನಿ “ಮಿಸೈಲ್ ಮ್ಯಾನ್” ಎಂದೇ ಖ್ಯಾತಿ ಪಡೆದಿದ್ದರು ಎಂದು ನಗರಸಭೆ ಸದಸ್ಯ ಡಾ.ಅಹ್ಮದ್ ಪಟೇಲ್ ಹೇಳಿದರು.
ಶಹಾಬಾದ ನಗರದ ಅಬ್ದುಲ್ ಕಲಾಂ ವೆಲ್ ಫೇರ್ ಟ್ರಸ್ಟ್ ವತಿಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಜಯಂತಿ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸರಳತೆ, ಪ್ರಾಮಾಣಿಕತೆ, ಮೇರು ವ್ಯಕ್ತಿತ್ವದ ದೇಶಪ್ರೇಮಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎನಿಸಿಕೊಂಡಿದ್ದ ಕಲಾಂ ಅವರು ನಮ್ಮ ದೇಶದ ವಿಜ್ಞಾನಿಗಳಾಗಿ, ರಾಷ್ಟ್ರಪತಿಗಳಾಗಿ ಅನೇಕ ವೈಜ್ಞಾನಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವು ನೀವೆಲ್ಲರೂ ಸೇವೆಯನ್ನು ಮಾಡುವ ಮೂಲಕ ಅಪ್ಪಟ ದೇಶ ಪ್ರೇಮಿಗಳಾಗಬೇಕು. ಅವರ ಬದುಕಿನ ಮೌಲ್ಯಗಳು, ಸರಳ ಸಜ್ಜನಿಕಿಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಅವರು ತಮ್ಮ ಇಡೀ ಜೀವನವನ್ನು ಭಾರತ ದೇಶದ ಏಳಿಗೆಗೆ ಮುಡಿಪಾಗಿಟ್ಟರು. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು
ಮುಖಂಡರಾದ ಅನ್ವರ್ ಪಾಶಾ,ನಿಂಗಣ್ಣ ಸಂಗಾವಿಕರ್,ಕಿರಣಕುಮಾರ ಚವ್ಹಾಣ,ಶೇಖ ಚಾಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹ್ಮದ್ ಜಾವೀದ್,ಅನ್ವರ್ ಪಾಶಾ, ನಿಂಗಣ್ಣ ಸಂಗಾವಿಕರ್, ಕಿರಣಕುಮಾರ ಚವ್ಹಾಣ,ಅಬ್ದುಲ್ ರಶೀದ್, ಶೇರ್ ಅಲಿ,ಶಮ್ಮಾಶ ಮರ್ಚಂಟ್,ಸಾಜೀದ್ ಗುತ್ತೆದಾರ, ಶಾಮ ದಂಡಗುಲಕರ್,ಮುನ್ನಾಫ್ ಪಟೇಲ್, ಸಲೀಂ ಸಾಬ ಇತರರು ಇದ್ದರು.





