ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕರ ದಿನಾಚರಣೆ : ಉತ್ತಮ ಚಾಲಕರಿಗೆ ಪ್ರಶಂಸೆ, ನಗದು ಬಹುಮಾನ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2 ರಿಂದ ಶುಕ್ರವಾರ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ, ಘಟಕ 2 ಮತ್ತು 3ರಲ್ಲಿ ವಾಹನ ಚಾಲಕರ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಭಾಗವಹಿಸಿ, ಕಳೆದ 2024ನೇ ಕ್ಯಾಲೆಂಡರ್ ಸಾಲಿನಲ್ಲಿ ಉತ್ತಮ ಹಾಜರಾತಿಯೊಂದಿಗೆ ಕರ್ತವ್ಯ ನಿರ್ವಹಿಸಿದ ಚಾಲಕರಿಗೆ ಪ್ರೊತ್ಸಾಹಿಸುವ ದೃಷ್ಠಿಯಿಂದ ಪ್ರಶಂಸನಾ ಪತ್ರ, 500 ರೂ. ನಗದು ಬಹುಮಾನ ವಿತರಿಸಿದಲ್ಲದೆ ಎಲ್ಲಾ ಚಾಲಕರಿಗೆ ಚಾಲಕರ ದಿನದ ಶುಭಾಶಯ ಕೋರಿದರು.
ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮುಖ್ಯ ಸಂಚಾರ ಅಧಿಕಾರಿ ಸಂತೋಷ ಕುಮಾರ, ಮುಖ್ಯ ಸಂಕ್ಯಾಧಿಕಾರಿ ಎಂ.ಆರ್.ಮುಂಜಿ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಬಸವರಾಜ ಬೆಳಗಾವಿ, ಕಲಬುರಗಿ ವಿಭಾಗ-2 ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿಗಳಿದ್ದರು.
Next Story







