ಕನಕಗಿರಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಕನಕಗಿರಿ: ಬಣ್ಣ ಬಣ್ಣದ ಹುಡುಗೆ ತೊಟ್ಟು ಹೊಸ ಉಡುಪುಗಳನ್ನು ಧರಿಸುವುದು ಹಬ್ಬವಲ್ಲ, ಬಡ,ಮಧ್ಯಮ, ದುರ್ಬಲ ವರ್ಗದವರಿಗೆ ಸಹಾಯ ಮಾಡುತ್ತಾ ಬಂದರೆ ಹಬ್ಬದ ಸಾರ್ಥಕತೆ ದೊರಕುವುದು ಎಂದು ಜಾಮೀಯಾ ಮಜ್ಜೀದ್ ಮೌಲಾನಾ ಮೊಹಮದ್ ಸಜಾ ನೂರಿ ತಿಳಿಸಿದರು.
ಅವರು ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ಹಬ್ಬದ ಉದ್ದೇಶಿಸಿ ಶನಿವಾರ ಮಾತನಾಡಿದರು.
ಈದ್ಗಾ ಮೈದಾನದ ಆವರಣದಲ್ಲಿ ಈದುಲ್ ಫಿತ್ರ್ ಹಬ್ಬದ ಪಾರ್ಥನೆ ಗೈಯಲು ಶಾಮೀಯಾನ ವ್ಯವಸ್ಥೆ ಮಾಡಿದ್ದ ತಾಜುಸಾಬ ಗೊರಳ್ಳಿ, ಒಂದು ತಿಂಗಳುಗಳ ಕಾಲ ರಮಝಾನ್ ಮಹತ್ವದ ಕುರಿತು ಬೋಧನೆ ಮಾಡಿದ ಜಾಮೀಯಾ ಮಜ್ಜೀದ್ ಮೌಲಾನಾ ಮುಹಮ್ಮದ್ ಸಜಾ ನೂರಿ, ಇಬ್ರಾಹಿಂ ಮಜ್ಜೀದ್ ಮೌಲಾನಾ ಮುಹಮ್ಮದ್ ಸದಾಂ ಹುಸೇನ್, ಸೇರಿದಂತೆ ಬಿಗಿ ಬಂದೋಬಸ್ತ್ ಒದಗಿಸಿದ ಪೋಲಿಸ್ ಇಲಾಖೆ, ಮೂಲಭೂತ ಸೌಕರ್ಯ ಒದಗಿಸಿದ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಈದ್ಗಾ ಕಮೀಟಿ ಅಧ್ಯಕ್ಷ ಹೊನ್ನುರಸಾಬ ಕಳ್ಳಿ, ಜಾಮೀಯಾ ಮಜ್ಜೀದ್ ಕಮೀಟಿ ಅಧ್ಯಕ್ಷ ಮಾಬುಸಾಬ ಗುರಿಕಾರ, ಇಬ್ರಾಹಿಂ ಮಜ್ಜೀದ್ ಅಧ್ಯಕ್ಷ ಪೀರಸಾಬ ಬೀಡಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಕಂಠೀರಂಗಪ್ಪ ನಾಯಕ್, ಸಮುದಾಯದ ಪ್ರಮುಖರಾದ ಇಮಾಮಸಾಬ ಎಲಿಗಾರ, ಬಾಬುಸಾಬ ಮುಲ್ಲಾರ, ಪಾಷಾ ಖಾನ್, ರಫೀಸಾಬ ಹೂಗಾರ, ಮೈಬೂಬಸಾಬ ಮೆಕಾನಿಕ್, ಖಾಜಸಾಬ ಗುರಿಕಾರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.




